ಅಮೇಜಾನ್ ಕಾಡಿನಲ್ಲಿ ಕಾಡುಕೋಣಗಳ ಹಿಂಡು ವಾಸವಾಗಿತ್ತು. ಕೆಲ ದಿನಗಳ ಬಳಿಕ ಕಡು ಬೇಸಿಗೆ ಕಾಲ ಬಂತು. ಎಲ್ಲಾ ಪ್ರಾಣಿಗಳಿಗೆ ಹಸಿರು ಆಹಾರ, ನೀರಿನ ಕೊರತೆ ಎದುರಾಗಲು ಆರಂಭ ವಾಯಿತು. ಕಾಡುಕೋಣಗಳ ಹಿಂಡು ಆ ಪ್ರದೇಶವನ್ನು ತೊರೆದು ಬೇರೆ ಕಡೆ ವಲಸೆ ಹೋಗಲು ನಿರ್ಧರಿಸಿತು. ಅತ್ಯಂತ ಹೆಚ್ಚು ಮಳೆ ಬೀಳುವ ಕಡೆ ಅಧಿಕ ಪ್ರದೇಶದಲ್ಲಿ ಹೆಚ್ಚು ಹುಲ್ಲು ಇರುವ ಕಡೆಗೆ ಹಿಂಡಿನೊಂದಿಗೆ ಹೋಗ ಬೇಕೆಂದು ಗುಂಪಿನ ಹಿರಿಯ ಕೋಣ ಬಯಸಿತ್ತು. ಗುಂಪಿನಲ್ಲಿ ರುವ ಇತರ ಸಹಚರರೊಂದಿಗೆ ಚರ್ಚಿಸಿತು. ಅವುಗಳು ತಮ್ಮ ಗುಂಪಿನ ಹಿರಿಯ ಕೋಣನ ಮಾತಿಗೆ ತಮ್ಮ ಸಹಮತ ಸೂಚಿಸಿದವು.

ಒಂದು ಮುಂಜಾನೆ ತನ್ನವರೊಡಗೂಡಿ ಹಿರಿಯ ಕಾಡುಕೋಣವು ತಮ್ಮ ಪ್ರಯಾಣವನ್ನು ಆರಂಭಿಸಿತು. ದಾರಿಯಲ್ಲಿ ಹಳ್ಳಕೊಳ್ಳಗಳು, ಗುಡ್ಡಬೆಟ್ಟಗಳನ್ನು ಕಾಡುಕೋಣಗಳ ಹಿಂಡು ಹತ್ತಿ ಇಳಿಯುತ್ತಾ ಸಾಗಿತು. ಒಂದೆಡೆ ದೊಡ್ಡ ನದಿಯನ್ನು ಅವುಗಳ ಹಿಂಡು ನಿರಾತಂಕವಾಗಿ ಸಾಗಿದವು. ಹಾದಿಯಲ್ಲಿ ದೊಡ್ಡ ಬೆಟ್ಟಗಳ ಸಾಲು ಎದುರಾಯಿತು. ಅಲ್ಲಿ ದೊಡ್ಡ ಹುಲಿಗಳ ಹಿಂಡು ವಾಸವಿದ್ದವು. ಬೆಟ್ಟದ ಮೇಲಿರುವ ಕಲ್ಲಿನ ಮೇಲೆ ಕುಳಿತು ಹಸಿದ ಹುಲಿಯು ದೂರದಲ್ಲಿನ ಪ್ರಾಣಿಗಳ ಚಲನವಲನಗಳನ್ನು ವೀಕ್ಷಿಸುತ್ತಿತ್ತು. ಅದಕ್ಕೆ ಕಾಡುಕೋಣಗಳ ಹಿಂಡು ಅತ್ತ ಕಡೆ ಬರುತ್ತಿರುವುದು ಕಾಣಿಸಿತು. ಅದಕ್ಕೆ ಹಿಂಡಿನಲ್ಲಿ ಸಣ್ಣ ಕರುವಿನೊಡನೆ ಓಡೋಡಿ ಬರುತ್ತಿರುವ ಬಾಣಂತಿ ಕಾಡುಕೋಣವು ಆಕರ್ಷಕವಾಗಿ ಕಂಡಿತು. ತನ್ನ ಹಸಿವು ಇಂದು ನೀಗುವುದರಲ್ಲಿ ಸಂಶಯವೇ ಇಲ್ಲ ಎಂದು ಹುಲಿ ಕುಣಿದಾಟಿತು.

ಬೆಟ್ಟದ ಮೇಲಿನಿಂದ ಓಡೋಡುತ್ತಾ ಹಸಿದ ಹೆಬ್ಬುಲಿ ಕಾಡುಕೋಣಗಳು ಬರುವ ಹಾದಿಯ ಸಮೀಪಕ್ಕೆ ಬಂತು. ಪೊದೆಗಳ ಮರೆಯಲ್ಲಿ ಅವಿತು ಕುಳಿತು, ಕಾಡುಕೋಣಗಳ ಹಿಂಡಿನ ಆಗಮನವನ್ನು ಅದು ನಿರೀಕ್ಷಿಸುತ್ತಿತ್ತು. ಕಾಡುಕೋಣಗಳ ಹಿಂಡು ನೂರಾರು ಬಲಿಷ್ಠ ಕೋಣಗಳನ್ನು ಒಳಗೊಂಡಿತ್ತು. ಗುಂಪಿನ ಕೊನೆಯಲ್ಲಿ ನೂರಾರು ಕಿಲೋಮೀಟರ್ ನಡೆದು ಬಸವಳಿದ ಬಾಣಂತಿ ಕಾಡುಕೋಣ ತನ್ನ ಕಂದನ ಸಂಗಡ ನಿಧಾನಕ್ಕೆ ಬರುತ್ತಿತ್ತು. ಇದರ ಮೇಲೆಯೇ ಕಣ್ಣಿಟ್ಟಿದ್ದ ಹುಲಿರಾಯ ಅವುಗಳನ್ನು ಓಡಿಸಲಾರಂಭಿಸಿದ. ಬಾಣಂತಿ ಕೋಣವು ತನ್ನ ಸಂಗಡಿಗರನ್ನು ಕೂಗಿ ಸಂಕಟವನ್ನು ತಿಳಿಸಿತು. ಕೂಡಲೇ ಮುಂದೆ ಸಾಗಿದ್ದ ಕಾಡುಕೋಣಗಳ ಹಿಂಡು ಬಾಣಂತಿಯ ಕರೆಗೆ ಓಗೊಟ್ಟು ಹುಲಿರಾಯನನ್ನು ಸುತ್ತುವರಿ ದವು. ಎಲ್ಲವೂ ಏಕಕಾಲದಲ್ಲಿ ಹುಲಿಯೊಂದಿಗೆ ವೀರಾವೇಶ ದಿಂದ ಕಾದಾಡಿದವು. ಇವುಗಳ ಮುಂದೆ ಹುಲಿರಾಯನ ಹೋರಾಟವು ನಡೆಯದೆ ಹೋಯಿತು. ಸೋತು ಶರಣಾಗಬೇಕಾಗಿ ಬಂತು. “ಬದುಕಿದರೆ, ಬೇಡಿ ತಿಂದೇನು” ಎಂದು ಮಿಂಚಿನ ವೇಗದಲ್ಲಿ ಬೆಟ್ಟದತ್ತ ಓಡಿ ಮರೆಯಾ ಯಿತು. ಕಾಡುಕೋಣಗಳು ಹರ್ಷದಿಂದ ಮುಂದೆ ಸಾಗಿದವು.

ನೀತಿ: ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲರೂ ಒಂದಾದಲ್ಲಿ ದೊಡ್ಡ ಶತ್ರುವನ್ನು ಸೋಲಿಸು ವುದು ಸುಲಭ.