ಶನಿವಾರಸಂತೆ, ಡಿ. 26: ಸಮೀಪದ ಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮಸ್ಥರ ಕ್ರೀಡಾಕೂಟ ಮತ್ತು ವಾರ್ಷಿಕೋತ್ಸವ ತಾ. 27 ಮತ್ತು 28ರಂದು ನಡೆಯಲಿದೆ.
ತಾ. 27ರಂದು (ಇಂದು) ಬೆಳಿಗ್ಗೆ 9.30ಕ್ಕೆ ಗ್ರಾಮಸ್ಥರ ಕ್ರೀಡಾಕೂಟವನ್ನು ಶಾಲಾಭಿವೃದ್ಧಿ ಸಮಿತಿ ನಿರ್ದೇಶಕ ಬಿ.ಈ. ಮಂಜುನಾಥ್ ಉದ್ಘಾಟಿಸಲಿದ್ದಾರೆ.
ಶನಿವಾರ ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎನ್. ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಲಿದ್ದಾರೆ.