ಕುಶಾಲನಗರ, ಡಿ. 26: ಮೈಸೂರು ಸುತ್ತೂರು ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವದ ಪ್ರಚಾರ ರಥ ಕುಶಾಲನಗರಕ್ಕೆ ಆಗಮಿಸಿತು. ಕೊಡಗು ಜಿಲ್ಲಾ ವೀರಶೈವ ಸಮಾಜದ ಪ್ರಮುಖರು ರಥವನ್ನು ಬರಮಾಡಿಕೊಂಡರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ರಥದಲ್ಲಿ ಅಳವಡಿಸಿದ್ದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಪುತಃಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು.
ರಥದ ಉಸ್ತುವಾರಿ ಪಂಚಾಕ್ಷರಿ ಜಾತ್ರಾ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು. ಈ ಸಂದರ್ಭ ವೀರಶೈವ ಸಮಾಜದ ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಆಧ್ಯಕ್ಷ ಎಸ್. ಮಹೇಶ್, ತಾಲೂಕು ಅಧ್ಯಕ್ಷ ಪಿ. ಮಹದೇವಪ್ಪ, ವೀರಾಜಪೇಟೆ ಅಧ್ಯಕ್ಷ ಸುರೇಶ್, ಮಹಿಳಾ ಘಟಕದ ಲೇಖನಾ ಧರ್ಮೇಂದ್ರ, ಅಕ್ಕನ ಬಳಗದ ಕಮಲ ಉದಯಕುಮಮಾರ್, ಲತಾ ಶಾಂಭಮೂರ್ತಿ, ಮನು ಜಗದೀಶ್, ರಥದ ಉಸ್ತುವಾರಿ ರಾಜಶೇಖರ್ ಮತ್ತಿತರರು ಇದ್ದರು.