ಮಡಿಕೇರಿ, ಡಿ. 26: ದೇಚೂರು ಬಡಾವಣೆಯ ಕೊಡವ ಕೇರಿ ವತಿಯಿಂದ ಮಡಿಕೇರಿಯ ಕೊಡವ ಸಮಾಜದಲ್ಲಿ ಪುತ್ತರಿ ಊರೊರ್ಮೆ ಹಾಗೂ ಕೇರಿಯ ಮಹಾಸಭೆ ನಡೆಯಿತು.

ದೇಚೂರು ವ್ಯಾಪ್ತಿಯ ಜನಾಂಗ ಬಾಂಧವರು ಊರೊರ್ಮೆಯಲ್ಲಿ ಪಾಲ್ಗೊಂಡು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಕೇರಿಯ ಅಧ್ಯಕ್ಷ ಮಾದೆಯಂಡ ರವಿ ಕುಂಞಪ್ಪ, ಪ್ರತಿಯೊಂದು ಕಡೆಗಳಲ್ಲಿಯೂ ಸಮುದಾಯ ಬಾಂಧವರಲ್ಲಿ ಪರಸ್ಪರ ಒಗ್ಗಟ್ಟು ಬೆಳೆಸುವುದಾಗಿದೆ. ಆ ನಿಟ್ಟಿನಲ್ಲಿ ವರ್ಷಕ್ಕೊಮ್ಮೆ ಎಲ್ಲರೂ ಒಟ್ಟು ಸೇರಿ ಸಂಭ್ರಮಿಸುವುದು ವಾಡಿಕೆಯಾಗಿದೆ ಎಂದರು. ಈ ಸಂದರ್ಭ ಕಳೆದ ಬಾರಿಯ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಕ್ಕೆಯಂಗಡ ಸೌಭಾಗ್ಯ ಪೊನ್ನಪ್ಪ, ಮೇವಂಡ ನಾಣಯ್ಯ, ಮಾಚಯ್ಯ ಮತ್ತಿತರರು ಇದ್ದರು.