ಕುಶಾಲನಗರ, ಡಿ. 26: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಬಡಾವಣೆಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ರಸ್ತೆ, ಬಾಪೂಜಿ ಬಡಾವಣೆ, ರಾಧಾಕೃಷ್ಣ ಬಡಾವಣೆ, ಕೆಇಬಿ ಪಕ್ಕದ ರಸ್ತೆ, ಯೋಗಾನಂದ ಮತ್ತು ಕರಿಯಪ್ಪ ಬಡಾವಣೆ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ರೂ. 34 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ರಂಜನ್, ಕುಶಾಲನಗರ, ಕೂಡಿಗೆ, ಕೂಡುಮಂಗಳೂರು ಹೆಬ್ಬಾಲೆ ವ್ಯಾಪ್ತಿಯಲ್ಲಿ ಒಟ್ಟು ರೂ. 2 ಕೋಟಿ 70 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಎಚ್ಚರವಹಿಸುವಂತೆ ಕಿವಿಮಾತು ಹೇಳಿದರು. ಈ ಸಂದರ್ಭ ದಂಡಿನಪೇಟೆ ಯಲ್ಲಿ ಕಾವೇರಿ ನದಿ ನೀರಿನ ಪ್ರವಾಹಕ್ಕೆ ಮುಳುಗಡೆಯಾದ ಸಂತ್ರಸ್ತರ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ ರೂಗಳ ಪರಿಹಾರ ಮೊತ್ತವನ್ನು ಶಾಸಕರು ಹಸ್ತಾಂತರಿಸಿ ದರು. ಮುಂದಿನ ದಿನಗಳಲ್ಲಿ ನದಿ ಉಕ್ಕಿ ಹರಿಯದಂತೆ ನದಿಯ ನಿರ್ವಹಣೆಗಾಗಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು. ಈ ಸಂದರ್ಭ ಜಿ.ಪಂ. ಸದಸ್ಯೆ ಮಂಜುಳಾ, ಕುಶಾಲನಗರ ಪ.ಪಂ. ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಅಮೃತ್ ರಾಜ್, ರೂಪಾ ಉಮಾಶಂಕರ್, ಜಯವರ್ಧನ, ಶೈಲಾಕೃಷ್ಣಪ್ಪ, ಜಯಲಕ್ಷ್ಮಿ ಚಂದ್ರು, ಜಯಲಕ್ಷ್ಮಿ ನಂಜುಂಡಸ್ವಾಮಿ, ವಿ.ಎಸ್. ಆನಂದಕುಮಾರ್, ಸುರೇಶ್, ದಿನೇಶ್, ರೇಣುಕಾ, ಬಿಜೆಪಿ ಮುಖಂಡರಾದ ಎಂ.ಎನ್. ಕುಮಾರಪ್ಪ, ವಿ.ಎನ್. ವಸಂತ ಕುಮಾರ್, ವಿ.ಡಿ. ಪುಂಡರೀಕಾಕ್ಷ, ಎಂ.ವಿ. ನಾರಾಯಣ, ಕೆ.ಜಿ. ಮನು, ಎಂ.ಎಂ. ಚರಣ್, ವೈಶಾಖ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಉಮಾಶಂಕರ್, ಪ.ಪಂ. ಮುಖ್ಯಾಧಿಕಾರಿ ಸುಜಯ್, ಅಭಿಯಂತರೆ ಶ್ರೀದೇವಿ, ಆರೋಗ್ಯಾಧಿಕಾರಿ ಉದಯ್ ಕುಮಾರ್ ಮತ್ತಿತರರು ಇದ್ದರು.