ಮಡಿಕೇರಿ, ಡಿ.26 : ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ತಾ.28 ರಂದು ‘ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ’ ನಡೆಯಲಿದೆಯೆಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಪ್ರÀಧಾನ ಕಾರ್ಯದರ್ಶಿ ಟಿ.ಆರ್.ಹರೀಶ್, ಅಂದು ಪೂರ್ವಾಹ್ನ 6 ಗಂಟೆಗೆ ನಡೆ ತೆಗೆಯುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಬಳಿಕ 6.05ಕ್ಕೆ ನೈರ್ಮಲ್ಯ ಪೂಜೆ, 6.30ಕ್ಕೆ ಗಣಪತಿ ಹೋಮ, 8 ಗಂಟೆಗೆ ಅಷ್ಟಾಭಿಷೇಕ ಸೇವೆ, 10.30ಕ್ಕೆ ಭಕ್ತರೊಡಗೂಡಿ ತುಳಸಿ ಸಹಸ್ರನಾಮಾರ್ಚನೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಮಂಗಳಾರತಿ ನಡೆಯಲಿದೆಯೆಂದು ಮಾಹಿತಿ ನೀಡಿದರು.

ಮೆರವಣಿಗೆ: ಸಂಜೆ 4 ಗಂಟೆಗೆ ಗಣ್ಯರಿಂದ ದೀಪ ಜ್ವಲನೆಯ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಅಲಂಕೃತ ಮಂಟಪದ ಮೆರವಣಿಗೆ ನೂರಾರು ವ್ರತಧಾರಿಗಳೊಂದಿಗೆ ಶಾಂತಿನಿಕೇತನದ ಬಳಿಯಿಂದ ಶ್ರೀ ಅಯ್ಯಪ್ಪ ದೇವಾಲಯದವರೆಗೆ ನಡೆಯಲಿದೆ. ಮೆರವಣಿಗೆಯಲ್ಲಿ ಮಹಿಳೆÉಯರು, ಮಕ್ಕಳು ಕಲಶದೊಂದಿಗೆ ಭಾಗವಹಿಸುವಂತೆ ಮನವಿ ಮಾಡಿದರು.

ಸಂಜೆ 6.30 ಕ್ಕೆ ದೇವಾಲಯದಲ್ಲಿ ದೀಪಾರಾಧನೆ, ಅಲಂಕಾರ ಪೂಜೆ, ಕೊರೋತ್ತ್ ರಾಜೇಶ್ ಮಾರಾರ್ ತಂಡದವರಿಂದ ಸೋಪಾನ ಸಂಗೀತ, ನಂತರ ಪಡಿರಂಗಪೂಜೆ, 8.30 ಕ್ಕೆ ಮಹಾಪೂಜೆ, ಅನ್ನಸಂತÀರ್ಪಣೆ ಜರುಗಲಿದೆಯೆಂದು ತಿಳಿಸಿ, ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಗುರುಸ್ವಾಮಿಗಳಾದ ಪಿ.ಸಿ. ಗೋಪಿಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿದೆಯೆಂದು ತಿಳಿಸಿದರು.

ಅನ್ನದಾನಕ್ಕೆ ಅಕ್ಕಿ ತರಕಾರಿ ಇತ್ಯಾದಿ ಸಾಮಗ್ರಿಗಳನ್ನು ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಕಚೇರಿಗೆ ಇಲ್ಲವೇ ಜ.ತಿಮ್ಮಯ್ಯ ವೃತ್ತದ ಬಳಿಯ ಗೋಪಿಸ್ವಾಮಿ ಅವರ ಐಶ್ವರ್ಯ ಫುಟ್‍ವೇರ್ ಅಂಗಡಿಗೆ ತಲುಪಿಸಬಹುದೆಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊ. 8095445234, 9972344243, 9480071349 ನ್ನು ಸಂಪರ್ಕಿಸ ಬಹುದೆಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷರುಗಳಾದ ಪಿ.ಸಿ.ಗೋಪಿ ಸ್ವಾಮಿ, ದೊರೆಸ್ವಾಮಿ, ಕಾರ್ಯದರ್ಶಿ ಬಿ.ವೈ.ರುಕ್ಮಾ ಹಾಗೂ ಸದಸ್ಯ ಆರ್. ಹರೀಶ್ ಉಪಸ್ಥಿತರಿದ್ದರು.