ಮಡಿಕೇರಿ, ಡಿ. 26: ಕಳೆದ ಕೆಲವು ದಿನಗಳಿಂದ ಕಾತರತೆಯಿಂದ ಕಾಯುತ್ತಿದ್ದ ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ಕೊಡಗು ಜಿಲ್ಲೆಯ ಅನೇಕ ಭಾಗಗಳಲ್ಲಿ ಸ್ಪಷ್ಟ ಗೋಚರವಾಯಿತು. ಸಾಮಾನ್ಯವಾಗಿ ಬೆಳಗಿನ ವೇಳೆ ಮಂಜು - ಮೋಡಕವಿದ ವಾತಾವರಣವಿರುವ ಮಡಿಕೇರಿ ನಗರದಲ್ಲಿಯಂತೂ ಇಂದು ಬೆಳಿಗ್ಗೆ ಮೋಡಮುಕ್ತ ವಾತಾವರಣ ಕಂಡುಬಂತು. ಗ್ರಹಣ ಪ್ರಾರಂಭದ 8 ಗಂಟೆ ವೇಳೆ ಪ್ರಾರಂಭಗೊಂಡ ಸೂರ್ಯ ರಶ್ಮಿಗಳ ಪ್ರಖರತೆ ಆಶ್ಚರ್ಯ ಮೂಡಿಸಿತು. ನಗರದ ಜನತೆಗೆ ಸ್ಪಷ್ಟ ಗ್ರಹಣ ದರ್ಶನವಾಯಿತು. ಬೆಳಿಗ್ಗೆ 9.25ಕ್ಕೆ ಸರಿಯಾಗಿ ಚಂದ್ರನಿಂದ ಆವೃತನಾದ ಸೂರ್ಯನ ಸುತ್ತಲೂ ಕಂಕಣಾಕಾರದ ಬೆಳಕು ಗೋಚರವಾಗಿ, ಮಡಿಕೇರಿ ನಗರದ ಜನತೆಗೆ ತೃಪ್ತಿ ಮೂಡಿಸಿತು. ಆದರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಅತಿನಿರೀಕ್ಷಿತವಾಗಿ ಗ್ರಹಣ ಗೋಚರವಾಗುತ್ತದೆ ಎಂದು ಕೆಲವರು ವಿಶೇಷ ತಯಾರಿ ನಡೆಸಿದ್ದರೂ, ಕುಟ್ಟ, ಕುಶಾಲನಗರ ಸೇರಿದಂತೆ ಪ್ರಾರಂಭದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಕೆಲ ಕಾಲದ ಬಳಿಕವಷ್ಟೇ ಗ್ರಹಣ ಗೋಚರವಾಯಿತು. ಈ ನಡುವೆ ಕೆಲವು ಪ್ರವಾಸಿಗರು ಮಡಿಕೇರಿಯಲ್ಲಿ ಕಂಡುಬಂದರೂ, ಜನಸಂಚಾರ ವಿರಳವಿತ್ತು. ವಾಹನ ಸಂಚಾರ ಅಷ್ಟಾಗಿ ಇರಲಿಲ್ಲ. ಬಹುತೇಕ ವ್ಯಾಪಾರೋದ್ಯಮ ಸ್ಥಗಿತಗೊಂಡಂತಿತ್ತು.

ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣಗಳು, ಇತರ ವಾಹನಗಳ ಸಂಚಾರದಲ್ಲಿ ಕೈಬೆರಳೆಣಿಯಂತೆ ಕಾಣಬರುತ್ತಿತ್ತು. ಹೊಟೇಲ್‍ಗಳೊಂದಿಗೆ ಉಪಹಾರ ಮಂದಿರಗಳು, ಮದ್ಯದಂಗಡಿಗಳ ಸಹಿತ ದೈನಂದಿನ ವ್ಯವಹಾರ ಕುದುರುತ್ತಿರಲಿಲ್ಲವೆಂದು ಸಂಬಂಧಿಸಿದ ವರ್ತಕರು ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು. ಇನ್ನು ಹನ್ನೊಂದು ಗಂಟೆಯ ಬಳಿಕ ದಿನದಲ್ಲಿ ಸ್ವಲ್ಪಮಟ್ಟಿಗೆ ಮಾಮೂಲಿ ಗಿರಾಕಿಗಳಷ್ಟೇ ದೈನಂದಿನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾಗಿ ಈ ಸಮುದಾಯದ ಮಂದಿ ತಿಳಿಸಿದರು. ಗ್ರಹಣ ಕಾಲದ ಕುರಿತು ಯಾವುದೇ ಚಿಂತೆಯಿಲ್ಲದೆ ಅನೇಕ ಪ್ರವಾಸಿಗರು ಹೊಟೇಲ್‍ಗಳಲ್ಲಿ ಉಪಹಾರ ಸೇವಿಸುತ್ತಿದ್ದ ದೃಶ್ಯವೂ ಎದುರಾಯಿತು.

ಒಂದು ರೀತಿಯಲ್ಲಿ ಕಂಕಣ ಸೂರ್ಯಗ್ರಹಣದ ಪರಿಣಾಮವೆಂಬಂತೆ ಬಸ್ ಪ್ರಯಾಣಿಕರ ಸಹಿತ ಎಲ್ಲಿಯೂ ಜನಸಂಚಾರ ಎಂದಿನಂತೆ ಗೋಚರಿಸಲಿಲ್ಲ; ಬದಲಾಗಿ ಎಲ್ಲೆಡೆ ಜನಜಂಗುಳಿಯಿಲ್ಲದೆ ಬಣಗುಟ್ಟುವ ದೃಶ್ಯ ಗೋಚರಿಸಿದರೆ, ಬದಲಾಗಿ ಎಲ್ಲೆಡೆ ಜನ ಜಂಗುಳಿ ಇಲ್ಲದೆ ಬಣಗುಟ್ಟುವ ದೃಶ್ಯ ಗೋಚರಿಸಿದರೆ, ದೇವಾಲಯಗಳಲ್ಲಿಯೂ ಹೆಚ್ಚೆನೆಡೆ ಪೂಜೆ ಇತ್ಯಾದಿ ಸ್ಥಗಿತಗೊಂಡಿದ್ದರಿಂದ ಭಕ್ತಸಮೂಹವೂ ಕಾಣಿಸಿಕೊಳ್ಳಲಿಲ್ಲ.

ಅನಿವಾರ್ಯವೆಂಬಂತೆ ದೂರದ ಊರಿನ ಕೆಲವಷ್ಟು ಪ್ರಯಾಣಿಕರು, ಕೈಬೆರಳೆಣಿಕೆಯ ಪ್ರಯಾಣಿಕರು ಅಲ್ಲಿ ಇಲ್ಲಿ ಗೋಚರಿಸತೊಡಗಿದ್ದು, ವಾತಾವರಣ ಕೂಡ ಮಂಕು ಕವಿದಂತೆ ಭಾಸವಾಗುತ್ತಿತ್ತು.

ಗಮನ ಸೆಳೆದ ಗಡಿ ಭಾಗ ‘ಕುಟ್ಟ’

ಗೋಣಿಕೊಪ್ಪಲು, ಡಿ.26: ಕಂಕಣ ಸೂರ್ಯಗ್ರಹಣವನ್ನು ಟೆಲಿಸ್ಕೋಪ್ ಮೂಲಕ ಇಸ್ರೋ ಬಾಹ್ಯಾಕಾಶ ಕೇಂದ್ರಕ್ಕೆ ಮಾಹಿತಿ ರವಾನಿಸಲಾಯಿತು. ದ.ಕೊಡಗಿನ ಗಡಿ ಭಾಗವಾದ ಕುಟ್ಟ, ಕಾಯಿಮಾನಿ ಭಾಗವು ರಾಷ್ಟ್ರದ ಗಮನ ಸೆಳೆಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಬಾಲವಿಜ್ಞಾನಿಗಳು, ನಾಗರಿಕರು ಅಪರೂಪದ ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಿಸುವ ಮೂಲಕ ಹರ್ಷಗೊಂಡರು. ಇದೇ ಮೊದಲ ಬಾರಿಗೆ ಕೊಡಗಿನ ಗಡಿ ಭಾಗದ ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಯಮಾನಿ ಹಾಗೂ ಕುಟ್ಟ ಪಟ್ಟಣದ ಮೇರಿ ಲ್ಯಾಂಡ್ ಕಾಫಿ ಎಸ್ಟೇಟ್‍ನಲ್ಲಿ ಗ್ರಹಣ ವೀಕ್ಷಣೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶ್ರೀಮಂಗಲ ಕುಟ್ಟ ಹೆದ್ದಾರಿ ಬದಿಯಲ್ಲಿರುವ ಕಾಯಿಮಾನಿಯ ಕೋಳೆರ ರವಿ ಕಾರ್ಯಪ್ಪ ಅವರ ಕಾಫಿ ಕಣ ಹಾಗೂ ಕುಟ್ಟ ಮೇರಿ ಲ್ಯಾಂಡ್ ಕಾಫಿ ಎಸ್ಟೇಟ್ ಮಾಲೀಕ ಚಕ್ಕೇರ ದೇವಯ್ಯ ಅವರ

(ಮೊದಲ ಪುಟದಿಂದ) ಮನೆಯ ಮುಂಭಾಗದಲ್ಲಿ ಗ್ರಹಣ ವೀಕ್ಷಣೆಗೆ ಸಕಲ ಸಿದ್ದತೆ ನಡೆದಿತ್ತು. ಮುಂಜಾನೆ ಎಂಟು ಗಂಟೆಯಿಂದ ಗ್ರಹಣ ಗೋಚರಿಸುವ ಸಮಯ ನಿಗದಿಯಾಗಿದ್ದರೂ ಏಳು ಗಂಟೆಗೆ ವಿವಿಧ ಭಾಗದಿಂದ ವಿದ್ಯಾರ್ಥಿಗಳು, ನಾಗರಿಕರು, ಕಾಯಿಮಾನಿ ಗದ್ದೆ ಬಯಲಿನಲ್ಲಿ ಸೇರಿದ್ದರು. ಮುಂಜಾನೆ ಯ ಮಂಜಿನ ನಡುವೆ ಮೋಡ ಮುಸುಕಿದ ವಾತಾವರಣ ಕಂಡು ಬಂದರಿಂದ ಸಹಜವಾಗಿಯೇ ಆಯೋಜಕರಿಗೆ ನಿರಾಶೆಯಾಯಿತು. ಸಮಯ 8.57ಕ್ಕೆ ಸರಿಯಾಗಿ ಗ್ರಹಣ ಗೋಚರಿಸುತ್ತಿದ್ದಂತೆ ವಿದ್ಯಾರ್ಥಿಗಳು ಹರ್ಷೋದ್ಗಾರದಿಂದ ಕೇಕೆ ಹಾಕಿ ಸೂರ್ಯ ಗ್ರಹಣ ವೀಕ್ಷಿಸಿದರು. ವಿದ್ಯಾರ್ಥಿಗಳು, ಸಾರ್ವಜನಿ ಕರೊಂದಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ತಹಶೀಲ್ದಾರ್ ಮಹೇಶ್, ಆರ್.ಐ. ಸುದೀಂದ್ರ, ಹಲವಾರು ವಿಜ್ಞಾನಿಗಳು, ಆಯೋಜಕರು, ಪ್ರಮುಖರು ಈ ವಿಸ್ಮಯ ಗ್ರಹಣವನ್ನು ವೀಕ್ಷಿಸಿದರು.

ಉತ್ತರವಾಗಿ 12 ಡಿಗ್ರಿ, ಪಶ್ಚಿಮವಾಗಿ 75 ಡಿಗ್ರಿ ಸರಳ ರೇಖೆಯಲ್ಲಿ ಹಾದು ಹೋದ ಚಂದ್ರ ಭೂಮಿ ಮತ್ತು ಸೂರ್ಯನ ಮಧ್ಯೆ ಬಂದು ಭೂಮಿಗೆ ಸೂರ್ಯ ಭಾಗಶಃ ಮರೆಯಾದನು. ಚಂದ್ರನ ಹಿಂದೆ ಅಡಗಿದ್ದ ಸೂರ್ಯನ ಸುತ್ತಳತೆಯ ತುದಿ ಭಾಗ ಕಂಕಣದಂತೆ ಕಾಣಿಸಿಕೊಂಡಿತು. ಇದೇ ‘ಕಂಕಣ ಸೂರ್ಯ ಗ್ರಹಣ’ ಸೂರ್ಯ, ಚಂದ್ರ, ಭೂಮಿ ಬರುವ ಒಂದೇ ಸರಳ ರೇಖೆಯಲ್ಲಿ ಕಾಯಿಮಾನಿ ಮತ್ತು ಕುಟ್ಟ ಪ್ರದೇಶಗಳು ಸೂಕ್ತವಾದ ಕಾರಣ ಪೂರ್ಣ ಗ್ರಹಣವನ್ನು ವೀಕ್ಷಿಸಲು ರಾಜ್ಯದ ವಿಜ್ಞಾನಿಗಳು ಖಗೋಳಶಾಸ್ತ್ರಜ್ಞರು ಆಗಮಿಸಿದ್ದರು. ಇಲ್ಲಿ ಕಂಡು ಬಂದ ಗ್ರಹಣದ ವಿದ್ಯಮಾನಗಳನ್ನು ಟೆಲಿಸ್ಕೋಪ್ ಮೂಲಕ ವಿಜ್ಞಾನಿಗಳು ಇಸ್ರೋ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಿದರು. ಈ ಅಪರೂಪದ ಗ್ರಹಣ ಇನ್ನು 45 ವರ್ಷಗಳ ಬಳಿಕ ಸಂಭವಿಸುತ್ತದೆ. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಖಗೋಳಾಸಕ್ತರು, ವಿಜ್ಞಾನಿಗಳು ಕಾತರರಾಗಿದ್ದರು.

ಮುಂಜಾನೆಯ ಮಂಜಿನ ನಡುವೆ, ಚುಮು, ಚುಮು ಚಳಿಯನ್ನು ಲೆಕ್ಕಿಸದೆ ಸೂರ್ಯನು ಕಾಣಿಸಿ ಕೊಳ್ಳುತ್ತಿದ್ದಂತೆಯೇ ಈ ಕ್ಷಣಕ್ಕಾಗಿ ಆತುರದಿಂದ ಕಾಯುತ್ತಿದ್ದ ಬಾಲ ವಿಜ್ಞಾನಿಗಳು ತಮ್ಮ ಬಳಿಯಿದ್ದ ಕನ್ನಡಕಗಳನ್ನು ಬಳಸಿಕೊಂಡು ಬಾರಿ ಉತ್ಸುಕತೆಯಿಂದ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಘಟಕ, ರಾಜ್ಯ ವಿಜ್ಞಾನ ಪರಿಷತ್, ಗ್ರಹಣ ವೀಕ್ಷಣೆಯ ಜತೆಗೆ ಸಂವಾದ ಹಮ್ಮಿಕೊಂಡಿತ್ತು. ಗ್ರಹಣ ವೀಕ್ಷಣೆಗೆ ಪುಣೆಯ ಖಗೋಳ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ರಾಜ್ಯದ ವಿವಿಧ ಜಿಲ್ಲೆಗಳಿಂದ ತಲಾ ಇಬ್ಬರು ಪ್ರತಿನಿಧಿಗಳು, ಮೈಸೂರು ವಿಜ್ಞಾನ ಕೇಂದ್ರ ಹಾಗೂ ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದರು. ಹೊರ ಜಿಲ್ಲೆಗಳಿಂದ ದಿನದ ಮೊದಲೇ ಆಗಮಿಸಿದ್ದ ವಿಜ್ಞಾನಾಸಕ್ತರಿಗೆ ಆಯೋಜಕರು ಊಟ, ವಸತಿ, ವಾಹನ, ವ್ಯವಸ್ಥೆ ಕಲ್ಪಿಸಿದ್ದರು. ಬರಿಗಣ್ಣಿನಲ್ಲಿ ಸೂರ್ಯ ಗ್ರಹಣ ನೋಡುವುದು ಅಪಾಯಕಾರಿ ಎಂದು ಸಾವಿರಾರು ವಿಶೇಷ ಕನ್ನಡಕಗಳನ್ನು ಸೂರ್ಯ ಗ್ರಹಣ ವೀಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು.

ಕಂಕಣ ಸೂರ್ಯ ಗ್ರಹಣದ ಅಂಗವಾಗಿ ಕೊಡಗಿನ ಕಾಯಿಮಾನಿ ಮತ್ತು ಕುಟ್ಟ ವಿಶ್ವಮಟ್ಟದಲ್ಲಿ ಗಮನ ಸೆಳೆಯಿತು. ಹೊರಗಿನಿಂದ ಆಗಮಿಸಿದ ಅತಿಥಿಗಳಿಗೆ ಕೊಡಗಿನ ಆತಿಥ್ಯ ಒದಗಿಸಲು ಜನರು ಮುಂದೆ ಬಂದಿದ್ದರು. ಅತಿಥಿಗಳು ಕೊಡಗಿನ ಬಿಸಿ ಬಿಸಿ ಕಾಫಿ ಸವಿದರು. ಗ್ರಹಣ ವೀಕ್ಷಣೆಗೆ ಅನುಕೂಲವಾಗುವಂತೆ ರೈತರಾದ ಕೋಳೆರ ರವಿ ಕಾರ್ಯಪ್ಪ ತಮ್ಮ ವಿಶಾಲವಾದ ಕಾಫಿ ಕಣವನ್ನು ಜೆಸಿಬಿ ಮೂಲಕ ಸ್ವಚ್ಚಗೊಳಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ಹಾಗೂ ನಿಲುಗಡೆಗೊಳ್ಳುವುದರಿಂದ ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ಅನುಕೂಲವಾಗುವಂತೆ ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಶ್ರೀಮಂಗಲ ಠಾಣಾಧಿಕಾರಿ ದಿನೇಶ್ ಕುಮಾರ್,ಕುಟ್ಟ ಠಾಣಾಧಿಕಾರಿ ಚಂದ್ರಪ್ಪ,ಎ ಎಸ್‍ಐ ಸಾಬು,ಅರುಣ್ ಕುಮಾರ್, ಮಿಲೇಶ್, ಹಾಗೂ ಸಿಬ್ಬಂದಿಗಳು ಮುಂಜಾಗೃತ ಕ್ರಮ ವಹಿಸಿದ್ದರು.

ಈ ಸಂದರ್ಭ ರಾಜ್ಯ ವಿಜ್ಞಾನ ಪರಿಷತ್‍ನ ರಾಜ್ಯ ಸಂಚಾಲಕ, ಹಾಗೂ ಉಪಾಧ್ಯಕ್ಷರಾದ ಎಸ್.ಎಂ. ಗುರುನಂಜಯ್ಯ, ಬೆಂಗಳೂರಿನ ಖಗೋಳಶಾಸ್ತ್ರಜ್ಞ ಶ್ರೀನಿವಾಸ್ ಮೂರ್ತಿ, ಪುಣೆಯ ಎಂಐಟಿಇಇ ಸಂಸ್ಥಾಪಕ ಸಾರಂಗ್ ಓಕ್, ಬಿಇಒ ಶೈಲ ಬೆಳಗಿ, ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಎಂ.ಎನ್. ವೆಂಕಟ ನಾಯಕ್, ಸಹ ಕಾರ್ಯದರ್ಶಿ ಜಿ. ಶ್ರೀಹರ್ಷ, ಖಜಾಂಜಿ ಎಸ್.ಹೆಚ್. ಈಶ, ಖಜಾಂಚಿ ನರೇಂದ್ರ ಆದನೂರು, ಖಗೋಳಾಸಕ್ತರಾದ ಶ್ರೀನಾಥ್, ಜಿಲ್ಲಾ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಮೊಯಿನುದ್ದೀನ್, ಪ್ರಧಾನ ಕಾರ್ಯದರ್ಶಿ ಟಿ.ಜಿ. ಪ್ರೇಮ್ ಕುಮಾರ್ ಹಾಗೂ ಇತರರು ಇದ್ದರು. ದೇಶದ ಇತರ ಭಾಗಗಳಲ್ಲಿ ಸೂರ್ಯಗ್ರಹಣದ ಪ್ರಮಾಣವು ಬೇರೆ ಬೇರೆ ರೀತಿಯಲ್ಲಿ ಗೋಚರಿಸಿದರೆ, ಕೊಡಗಿನ ಕುಟ್ಟದಲ್ಲಿ ಶೇ.96 ಸೂರ್ಯಗ್ರಹಣ ಗೋಚರಿತು. ಕಾಯಿಮನೆಯಲ್ಲಿ ಶೇ.98 ಭಾಗ ಗೋಚರಿಸಿತು. ವಿಸ್ಮಯ ವೀಕ್ಷಣೆ ಹಾಗೂ ಅಧ್ಯಯನಕ್ಕೆ ಹಲವೆಡೆಯಿಂದ ಖಗೋಳ ವಿಜ್ಞಾನಿಗಳು ಆಗಮಿಸಿ ದ್ದರು. ಪುಣೆಯ ಖಗೋಳ ಮತ್ತು ಪರಿಸರ ಕೇಂದ್ರದ ವಿಜ್ಞಾನಿಗಳ ತಂಡವು ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿತ್ತು. ಸಜ್ಜುಗೊಳಿಸಲಾಗಿದ್ದ ವಿಶಾಲ ಮೈದಾನದಲ್ಲಿ ಸೌರ ಕನ್ನಡಕದ ಮೂಲಕ ಈ ವಿಸ್ಮಯ ಕ್ಷಣಗಳನ್ನು ನೋಡುಗರು ಕಣ್ತುಂಬಿಕೊಂಡರು. ಅಪರೂಪದ ವಿಸ್ಮಯವನ್ನು ಯಾರೂ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಕೊಡಗು ಜಿಲ್ಲಾ ವಿಜ್ಞಾನ ಪರಿಷತ್ ವತಿಯಿಂದ, ವಿದ್ಯಾರ್ಥಿಗಳಿಗೆ ಸೌರ ಕನ್ನಡಕ ವಿತರಿಸಲಾಯಿತು.

ವೈಜ್ಞಾನಿಕ ವಿಚಾರಧಾರೆಯ ಅರಿವು

ಖಗೋಳದಲ್ಲಿ ಸಂಭವಿಸಿದ ಅಪರೂಪದ ಕಂಕಣ ಸೂರ್ಯ ಗ್ರಹಣ ವೀಕ್ಷಣೆಯೊಂದಿಗೆ, ಇಸ್ರೋ ವಿಜ್ಞಾನಿಗಳ ತಂಡದಿಂದ ಯುವ ಜನಾಂಗಕ್ಕೆ ವೈಜ್ಞಾನಿಕ ಲೋಕದ ಸ್ಥೂಲ ಪರಿಚಯ ಕಾರ್ಯಕ್ರಮವು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ನಡೆಯಿತು. ಹಾಸನ ಇಸ್ರೋ ಶಾಖೆಯ ಎಂ.ಸಿ.ಎಫ್. ಘಟಕದ ಹನ್ನೊಂದು ವಿಜ್ಞಾನಿಗಳ ತಂಡ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕಂಕಣ ಸೂರ್ಯಗ್ರಹಣ ವೀಕ್ಷಣೆ ಸಹಿತ ಪ್ರತ್ಯಕ್ಷ ವಿವರಣೆ ನೀಡಿದರು.

ಹಾಸನದ ಇಸ್ರೋ ಶಾಖೆಯ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಘಟಕದ ಪ್ರಮುಖ ವಿಜ್ಞಾನಿಗಳಾದ ದೀಪಕ್ ಜೋಷಿ, ರಾಮಚಂದ್ರ ಭಟ್ ಸಹಿತ ಹನ್ನೊಂದು ಮಂದಿ ಈ ತಂಡದಲ್ಲಿದ್ದು, ಮಕ್ಕಳಿಗೆ ಸೌರಮಂಡಲದ ಸ್ಥೂಲ ಪರಿಚಯ, ಭೂಮಿಯಿಂದ ಖಗೋಳಕ್ಕೆ ರಾಕೆಟ್ ಉಡ್ಡಯನಗೊಳಿಸುವ ತಂತ್ರಜ್ಞಾನ, ವೈಜ್ಞಾನಿಕ ಸಾಧನೆ, ಆವಿಷ್ಕಾರಗಳು, ತಂತ್ರಜ್ಞಾನ ಮುಂತಾದ ವಿಚಾರಗಳ ಸಹಿತ ಹಲವು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಶಾಲೆಯಲ್ಲಿ ವಾಟರ್ ರಾಕೆಟ್ ಆವಿಷ್ಕಾರದ ಪ್ರಾತ್ಯಕ್ಷಿಕೆ ಮುಖಾಂತರ ಅರಿವು ಮೂಡಿಸುವುದರೊಂದಿಗೆ; ಕೊಡಗಿನ ನೆಲದಲ್ಲಿ ಕಂಕಣ ಸೂರ್ಯಗ್ರಹಣ ಗೋಚರ ಸಂದರ್ಭ ಯುವ ಪೀಳಿಗೆಗೆ ವೈಜ್ಞಾನಿಕ ಅರಿವು ಮೂಡಿಸಲು ಜ. ತಿಮ್ಮಯ್ಯ ಶಾಲೆಯ ಉತ್ತಮ ಪರಿಸರದಲ್ಲಿ ಅವಕಾಶ ಲಭಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಶಾಲಾ ಮಕ್ಕಳಿಗೆ ಇಸ್ರೋ ಸಾಧನೆಯ ಚಿತ್ರಪಟಗಳು, ಕರಪತ್ರಗಳ ಸಹಿತ ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹಕರ ಬಹುಮಾನ ವಿತರಿಸಿದರು.

ಜ. ತಿಮ್ಮಯ್ಯ ಶಾಲೆಯ ಪ್ರಾಂಶುಪಾಲೆ ಸರಸ್ವತಿ, ನಿರ್ದೇಶಕ ಕಾಳಪ್ಪ ಸೇರಿದಂತೆ ವಿಜ್ಞಾನಿಗಳಾದ ರಾಜೇಶ್ ಕಣ್ಣನ್, ಮಣಿಕಂಠನ್, ಅಕ್ಷರ, ಭಾನುತೇಜ್, ಪ್ರಫುಲ್ ರಾಯ್, ಅನುಜ್ ಜಗದೀಪ್, ಲೋಲಾಕ್ಷಿ, ದಿವ್ಯ, ಸೋಮಶೇಖರ್ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿ ಸಮೂಹದವರು ಪಾಲ್ಗೊಂಡಿದ್ದರು. 10ನೇ ತರಗತಿ ಮಕ್ಕಳೊಂದಿಗೆ ವಿಜ್ಞಾನಲೋಕಕ್ಕೆ ಸಂಬಂಧಿಸಿದಂತೆ ಸಂವಾದ ನಡೆಸಿದ ವಿಜ್ಞಾನಿಗಳು, 8, 9ನೇ ತರಗತಿಯ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಮೂಲಕ ಪ್ರೋತ್ಸಾಹಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ನಡೆದವು. ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಾಲೆಯ ಪ್ರಾಂಶುಪಾಲೆ ಬಿ.ಎಂ.ಸರಸ್ವತಿ ಮಾತನಾಡಿ, ಇಸ್ರೋ ತಂಡ ವಿದ್ಯಾರ್ಥಿಗಳಿಗೆ ವಿಜ್ಞಾನ ಲೋಕದ ಮಾಹಿತಿ ನೀಡಿರುವುದು ಹೆಮ್ಮೆಯ ವಿಚಾರವೆಂದರು. ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರಿಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಮತ್ತು ಇಸ್ರೋದ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೂರಾರು ವಿದ್ಯಾರ್ಥಿಗಳು ಅಪರೂಪದ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾದರು, ಸೂರ್ಯಗ್ರಹಣ ನೋಡಿ ಸಂಭ್ರಮಿಸಿದರು.

ಗ್ರಹಣ ವೀಕ್ಷಣೆ - ಭಕ್ಷಣೆ

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಕಂಕಣ ಸೂರ್ಯಗ್ರಹಣದ ಅಂಗವಾಗಿ ಕಾಲೇಜಿನ ಮೈದಾನದಲ್ಲಿ ಗ್ರಹಣ ವೀಕ್ಷಣೆ ಭಕ್ಷಣೆ ಕಾರ್ಯಕ್ರಮ ನಡೆಯಿತು.

ಗ್ರಹಣ ವೀಕ್ಷಣೆ ಸಂದರ್ಭ ಮೌಢ್ಯವನ್ನು ತೊಲಗಿಸುವ ಉದ್ದೇಶದಿಂದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ರಂಗಪ್ಪ ನೇತೃತ್ವದಲ್ಲಿ ಕಾಲೇಜಿನಲ್ಲಿಯೇ ಅಡುಗೆಯನ್ನು ತಯಾರಿಸಲಾಗಿತ್ತು. ಟೀ, ಕಾಫಿ ಹಾಗೂ ಮೊಟ್ಟೆಯ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣ ವೀಕ್ಷಣೆಗೆ ಆಗಮಿಸಿದವರಿಗೆ ಪಲಾವ್, ಟೀ, ಕಾಫಿ ವಿತರಿಸಿ ಗ್ರಹಣದ ಸಂದರ್ಭ ಆಹಾರ ಸೇವಿಸಬಾರದು ಎನ್ನುವುದು ಮೌಢ್ಯವಾಗಿದೆ ಎನ್ನುವ ಮೂಲಕ ವೈಜ್ಞಾನಿಕ ಪ್ರಜ್ಞೆಯನ್ನು ಮೂಡಿಸಲು ಪ್ರಯತ್ನಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಮಾಜಶಾಸ್ತ್ರ ವಿಭಾಗ ಉಪನ್ಯಾಸಕ ರಂಗಪ್ಪ, ಸಮಾಜದಲ್ಲಿರುವ ಮೌಢ್ಯವನ್ನು ತೊಲಗಿಸಿ, ಗ್ರಹಣ ಎನ್ನುವುದು ಒಂದು ನೈಸರ್ಗಿಕ ಕ್ರಿಯೆ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಸಂದರ್ಭ ಗ್ರಹಗಳಿಗೆ ಗ್ರಹಣ ಮನುಷ್ಯರಿಗಲ್ಲ, ಮನಸ್ಸಿಗೆ ಅಂಟಿದ ಮೌಢ್ಯಗ್ರಹಣ ಓಡಿಸಿ ಎಂಬಿತ್ಯಾದಿ ಭಿತ್ತಿಪತ್ರಗಳು ಗಮನ ಸೆಳೆದವು.

ಗ್ರಹಣ ವೀಕ್ಷಣೆ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಜಗತ್ ತಿಮ್ಮಯ್ಯ, ಸಮಾಜಶಾಸ್ತ್ರ ವಿಭಾಗದ ಪ್ರದೀಪ್, ಪತ್ರಿಕೋದ್ಯಮ ವಿಭಾಗದ ಇಳಯರಾಜ, ಪ್ರಗತಿ ಪರ ಚಿಂತಕ ಅಲ್ಲಾರಂಡ ವಿಠಲ್ ನಂಜಪ್ಪ, ಅರ್ಥಶಾಸ್ತ್ರ, ಕನ್ನಡ ಸಂಶೋಧನಾ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಕ್ರೀಡಾಂಗಣದಲ್ಲಿ

ಮಡಿಕೇರಿ: ಬೆಳಿಗ್ಗೆ ಸುಮಾರು 8 ಗಂಟೆಗೆ ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಕ್ರೀಡಾಪಟುಗಳು ತಮ್ಮ ದಿನನಿತ್ಯದ ವ್ಯಾಯಾಮ, ಜಾಗಿಂಗ್, ಹಾಕಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೈದಾನದ ಬಳಿ ಸೂರ್ಯಗ್ರಹಣ ವನ್ನು ಕಾಯುತ್ತಾ ಸುಮಾರು ಮಂದಿ ಸೌರ ಕನ್ನಡಕಗಳನ್ನು ತಯಾರಿ ಮಾಡಿಕೊಂಡು ಗ್ರಹಣ ವೀಕ್ಷಣೆಗೆ ಸಿದ್ದರಾದರು. ಸುಮಾರು 8:05 ಕ್ಕೆ ಚಂದ್ರನು, ಜಿಲ್ಲೆಯಲ್ಲಿ ಕಂಡಂತೆ ಸೂರ್ಯನ ಮೇಲ್ಭಾಗದಿಂದ ಚಲಿಸಿ (ಪೂರ್ವ ದಿಕ್ಕಿನಿಂದ) ಸೂರ್ಯ ನನ್ನು ತಡೆಯಲಾರಂಭಿ ಸಿದನು. ಸುಮಾರು 9 ಗಂಟೆಗೆ ಸೂರ್ಯನ ಅರ್ಧ ಭಾಗದಷ್ಟು ತಡೆದಿದ್ದು ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳು, ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕುತೂಹಲದಿಂದ ಮೈದಾನದ ಬಳಿ ಓಡಿ ಬಂದು ಸೌರ ಕನ್ನಡಕ ಬಳಸಿ ಗ್ರಹಣ ನೋಡಲಾರಂಭಿಸಿದರು. ಸುಮಾರು 9:30 ಕ್ಕೆ ಚಂದ್ರನು ಸಂಪೂರ್ಣವಾಗಿ ಸೂರ್ಯನನ್ನು ತಡೆದಿದ್ದು ಕಂಕಣ ರೂಪದಲ್ಲಿ ಸೂರ್ಯನ ಬಾಹ್ಯರೂಪದ ಸುತ್ತಳತೆಯು ಕಾಣಿಸಿಕೊಂಡಿತು. ಈ ಸಂದರ್ಭ ನೆರೆದಿದ್ದ ಎಲ್ಲರೂ ಹರ್ಷೋದ್ಘಾರ ಮಾಡಿದರು. ಸುಮಾರು 11:05 ಕ್ಕೆ ಜಿಲ್ಲೆಯಲ್ಲಿ ಕಂಡಂತೆ ಸೂರ್ಯನ ಕೆಳಭಾಗದಿಂದ (ಪಶ್ಚಿಮ ದಿಕ್ಕಿನೆಡೆಗೆ) ಚಂದ್ರನು ಚಲಿಸಿ ಸೂರ್ಯನಿಗೆ ಬಿಡುವು ನೀಡಿದನು.

ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ , ರಾಜ್ಯ ವಿಜ್ಞಾನ ಪರಿಷತ್ತ್ ರೋಟರಿ ಕ್ಲಬ್ ಹಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಿಂದ ಆಯೋಜಸಿದ್ದ ಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಸಾರ್ವಜನಿಕರು ಹಾಗೂ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೀಕ್ಷಣಾ ಸಂದರ್ಭ ಸೂರ್ಯಗ್ರಹಣ ವೀಕ್ಷಣಾ ಸಮಿತಿಯ ಪ್ರಮುಖರೂ ಆದ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಮಾಜಿ ಉಪಾಧ್ಯಕ್ಷ ಬೇಬಿ ಮ್ಯಾಥಿವ್ ಸುರಕ್ಷಿತವಾಗಿ ಸೌರ ಕನ್ನಡಕ ಬಳಸಿ ಗ್ರಹಣ ವೀಕ್ಷಸುವಂತೆ ನೆರೆದಿದ್ದವರಲ್ಲಿ ಕೇಳಿಕೊಂಡರು. ಸತತ 2 ದಿನಗಳ ಕಾಲ ಮಡಿಕೇರಿಯಲ್ಲಿ ಮೋಡದ ವಾತಾವರಣವಿದ್ದು ಗ್ರಹಣ ವೀಕ್ಷಣೆಗೆ ತೊಂದರೆಯಾಗ ಬಹುದೆಂದೆನಿಸಿದ್ದೆವು, ಆದರೆ ಇಂದು ನಗರದಲ್ಲಿ ಮೋಡದ ವಾತಾವರಣ ಇಲ್ಲದೆ ಇದ್ದುದರಿಂದ ಗ್ರಹಣ ವೀಕ್ಷಣೆಗೆ ಯಾವುದೇ ತೊಂದರೆ ಆಗಲಿಲ್ಲ ಎಂದು ಬೇಬಿ ಮ್ಯಾಥಿವ್ ಸಂತೋಷ ವ್ಯಕ್ತಪಡಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ರಂಜಿತ್ ಕೆ.ಯು ಸೌರ ಕನ್ನಡಕಗಳನ್ನು ವಿತರಿಸಿದರು. ಆರೋಹಣಾ ಸಮಿತಿಯ ಪ್ರಮುಖ ಮಹೇಶ್ ಅವರು ಕೂಡ ಈ ಸಂದರ್ಭ ಹಾಜರಿದ್ದರು.

ಶ್ರೀಮಂಗಲ: ಕಂಕಣ ಸೂರ್ಯಗ್ರಹಣವನ್ನು ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಕುಮಟೂರು ಗ್ರಾಮದ ಜೆಸಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ವಿಶೇಷ ಕನ್ನಡಕ ಧರಿಸಿ ವೀಕ್ಷಣೆ ಮಾಡಿದರು.

ಈ ಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತ್‍ನ ಶಿಫಾರಸ್ಸಿನಂತೆ ರಾಜ್ಯದ ಎಲ್ಲಾ ಜಿಲ್ಲೆಯಿಂದ ತಲಾ ಒಬ್ಬ ಬಾಲ ವಿಜ್ಞಾನಿ ಮತ್ತು ಅವರೊಂದಿಗೆ ಒಬ್ಬ ಶಿಕ್ಷಕ ಸೇರಿ 60 ಶಿಬಿರಾರ್ಥಿಗಳು ಬುಧವಾರ ಸಂಜೆಯಿಂದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಕ್ಯಾಂಪ್ ವ್ಯವಸ್ಥೆ ಮಾಡಲಾಗಿತ್ತು.

ಜೆಸಿ ವಿದ್ಯಾಸಂಸ್ಥೆಯ 5ನೇ ತರಗತಿ ಮೇಲ್ಪಟ್ಟ 150 ವಿದ್ಯಾರ್ಥಿಗಳಿಗೆ ಚಿತ್ರದುರ್ಗದಿಂದ ಶಾಲಾ ಆಡಳಿತ ಮಂಡಳಿ ಗ್ರಹಣ ವೀಕ್ಷಣೆಗೆ ವಿಶೇಷ ಕನ್ನಡಕವನ್ನು ನೀಡಿ ವ್ಯವಸ್ಥೆ ಮಾಡಿತ್ತು ಎಂದು ಜೆಸಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಕೋಟ್ರಂಗಡ ತಿಮ್ಮಯ್ಯ ತಿಳಿಸಿದರು.

ಗ್ರಹಣ ವೇಳೆ ಮೋಡ ಕವಿದ ವಾತಾವರಣದಲ್ಲಿಯೂ ಕೆಲವೊಮ್ಮೆ ಗೋಚರಿಸುತ್ತಿತ್ತು. ಗ್ರಹಣ ವೀಕ್ಷಣೆ ಮೂಲಕ ಖಗೋಳ ವಿಜ್ಞಾನದ ಕೌತುಕವನ್ನು ವಿದ್ಯಾರ್ಥಿಗಳು ಸವಿದರು.

ಕುಶಾಲನಗರ : ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಂಕಣ ಸೂರ್ಯ ಗ್ರಹಣವನ್ನು ಶಾಲಾ ವಿದ್ಯಾರ್ಥಿಗಳು ವೀಕ್ಷಿಸಿ ಕಣ್ತುಂಬಿಕೊಂಡರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಕುಶಾಲನಗರ ರೋಟರಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗ್ರಹಣ ವೀಕ್ಷಣೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಶಾಲಾ ವಿದ್ಯಾರ್ಥಿಗಳು ಗ್ರಹಣ ಮೋಕ್ಷ ಕಾಲವನ್ನು ವೀಕ್ಷಣೆ ಮಾಡಿದರು.

ಪಟ್ಟಣ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದಲೇ ಮಂಜು ಮುಸುಕಿದ ವಾತಾವರಣದಿಂದಾಗಿ ಸೂರ್ಯ ಗೋಚರಿಸಿರಲಿಲ್ಲ. ಗ್ರಹಣ ದೃಶ್ಯ ವೀಕ್ಷಣೆಗೆ ಮುಂದಾಗಿದ್ದವರಲ್ಲಿ ಇದು ತುಸು ನಿರಾಸೆ ಉಂಟುಮಾಡಿತು. 10.20 ರ ನಂತರ ನಿಧಾನವಾಗಿ ಮಂಜು ಸರಿಯಲು ಆರಂಭಿಸಿ ಗ್ರಹಣ ಗೋಚರವಾಗತೊಡಗಿತು. 10.30 ಮೈದಾನಕ್ಕಿಳಿದ ನೂರಾರು ಸಂಖ್ಯೆ ವಿದ್ಯಾರ್ಥಿಗಳು ಸೌರ ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿದರು. ಬಿಟ್ಟು ಬಿಟ್ಟು ಗೋಚರವಾಗುತ್ತಿದ್ದ ಗ್ರಹಣ ಮೋ?