ಶನಿವಾರಸಂತೆ, ಡಿ. 26: ಪಟ್ಟಣದ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯ ಬಾಲಿಕಾ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಗೋಲ್ಡನ್ ಸ್ಕೂಲ್‍ನ ರಜತ ಮಹೋತ್ಸವ ತಾ. 27 ಮತ್ತು 28 ರಂದು ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ನಡೆಯುವ ವೇದಿಕೆ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಉಪಾಧ್ಯಕ್ಷ ಕೆ.ಈ. ಕೃಷ್ಣರಾಜ್ ವಹಿಸುತ್ತಾರೆ. ನಿರ್ದೇಶಕ ಗೋವಿಂದೇಗೌಡ ಉದ್ಘಾಟಿಸುತ್ತಾರೆ. ಕೂಡಿಗೆ ಡಯಟ್ ಉಪನ್ಯಾಸಕ ಶಿವಕುಮಾರ್ ಮುಖ್ಯ ಭಾಷಣ ಮಾಡುತ್ತಾರೆ. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಸಿ.ಎನ್. ಬೆಳ್ಳಿಯಪ್ಪ, ಜನಪ್ರತಿನಿಧಿಗಳಾದ ಸರೋಜಮ್ಮ, ಬಿ.ಎಸ್. ಅನಂತಕುಮಾರ್, ಸಿ.ಜೆ. ಗಿರೀಶ್, ಮಹಮ್ಮದ್ ಗೌಸ್, ಶಿಕ್ಷಣ ಸಂಯೋಜಕ ಹೆಚ್.ಆರ್. ಶೇಖರ್ ಮೊದಲಾದವರು ಭಾಗವಹಿಸಲಿದ್ದಾರೆ.
ತಾ. 28 ರಂದು ಸಮಾರೋಪ ಸಮಾರಂಭ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದ್ದು, ಆದಿಚುಂಚನಗಿರಿ ಸಂಸ್ಥಾನದ ಡಾ. ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯ ವಹಿಸುತ್ತಾರೆ. ಹಾಸನದ ಶಾಖಾ ಮಠದ ಶಂಭುನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಮಣ್ಯ ಅಧ್ಯಕ್ಷತೆ ವಹಿಸುತ್ತಾರೆ. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ನ್ಯಾಯಾಧೀಶ ಹೆಚ್. ಸಂದೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ.