ಮಡಿಕೇರಿ, ಡಿ. 26: ಕೊಡಗರಹಳ್ಳಿ ಗ್ರಾಮದ ಉಪ್ಪುತೋಡುವಿನಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 21ನೇ ವರ್ಷದ ವಿಶೇಷ ಮಂಡಲ ಪೂಜೆ ಹಾಗೂ ದೇವಾಲಯದ ವಾರ್ಷಿಕೋತ್ಸವವು ತಾ. 28 ರಂದು ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಗಣಪತಿ ಹೋಮ ನಡೆಯಲಿದ್ದು, ಸಂಜೆ 7 ಗಂಟೆಗೆ ವಿದ್ಯುತ್ ಅಲಂಕೃತ ಭವ್ಯ ಮಂಟಪ ಪಟ್ಟಣದಲ್ಲಿ ಮೆರವಣಿಗೆ ಸಾಗಲಿದೆ. ರಾತ್ರಿ 10 ಗಂಟೆಗೆ ಅಗ್ನಿಕುಂಡ ಪೂಜೆ, ಭಜನೆ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಮಹಾಪೂಜೆ ನಂತರ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ.