ಮಡಿಕೇರಿ, ಡಿ. 26: ಕೊಡಗು ಫಾರ್ ಟುಮಾರೋ ತಂಡದಿಂದ ಸಸಿ ನೆಡುವ ಅಭಿಯಾನವನ್ನು ಜ. 5 ರಂದು ಬೆಳಿಗ್ಗೆ 10 ಗಂಟೆಗೆ ಕುಶಾಲನಗರದ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಕುಸಿಯುತ್ತಿದ್ದು, ಅರಣ್ಯ ನಾಶವೇ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಕೊಡಗಿನಲ್ಲಿ ಉಂಟಾದ ಅರಣ್ಯ ನಾಶವನ್ನು ಪುನಃಸ್ಥಾಪಿಸಿ, ಕೊಡಗನ್ನು ಹಚ್ಚ ಹಸಿರನ್ನಾಗಿಸಲು ಕೊಡಗು ಫಾರ್ ಟುಮಾರೊ ತಂಡವು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೊಡಗು ಫಾರ್ ಟುಮಾರೋ ತಂಡವು ಗಿಡ ನೆಡುವ ಕಾರ್ಯಕ್ರಮವನ್ನು ಟೊಯೋಟ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ 9663662191 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.