ಹಾಕಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಕೊಡಗಿನ ಯುವ ಕ್ರೀಡಾಪ್ರತಿಭೆ ಬಾರಿಕೆ ಜೀವಿತ. 15 ವರ್ಷದ ಬಾಲಕಿ ರಾಜ್ಯಮಟ್ಟದ ಮಹಿಳೆಯರ ಸಬ್ ಜ್ಯೂನಿಯರ್ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಹಾಕಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾಳೆ. 2015ರಲ್ಲಿ ಕಕ್ಕಬ್ಬೆಯಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಜೀವಿತ, ಹಾಕಿ ಕ್ರೀಡೆಯಲ್ಲಿ ಉತ್ಸಾಹ ತಾಳಿದ್ದಲ್ಲದೆ ವಿವಿಧೆಡೆ ನಡೆದ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಮಗಳ ಆಸಕ್ತಿಯನ್ನು ಗಮನಿಸಿದ ತಂದೆ ಕಾಫಿ ಬೆಳೆಗಾರ ಬಾರಿಕೆ ಎಸ್. ನಂದಾಗಿರೀಶ್ ಮಗಳನ್ನು ಪೊನ್ನಂಪೇಟೆಯ ಸ್ಪೋಟ್ರ್ಸ್ ಹಾಸ್ಟೆಲ್‍ಗೆ ದಾಖಲಿಸಿದ್ದರು. ಕೋಚ್ ಬಿ.ಎ. ಚೆಂಗಪ್ಪ ಗರಡಿಯಲ್ಲಿ ಪಳಗಿದ ಜೀವಿತ ಮುಂದಿನ ದಿನಗಳಲ್ಲಿ ಹಾಕಿಯಲ್ಲಿ ಗಮನಾರ್ಹ ಸಾಧನೆ ತೋರಿದ್ದಾಳೆ. ಇದುವರೆಗೆ ಎರಡು ರಾಷ್ಟ್ರೀಯ ಚಾಂಪಿಯನ್‍ಶಿಪ್ ಪಂದ್ಯಾವಳಿಗಳಲ್ಲಿ ಹಾಕಿ ಕೂರ್ಗ್‍ನ್ನು ಪ್ರತಿನಿಧಿಸಿದ್ದು 2017-18ರಲ್ಲಿ ಅಸ್ಸಾಂನಲ್ಲಿ ನಡೆದ ಪಂದ್ಯದಲ್ಲಿ ಜೀವಿತ ಗಮನಾರ್ಹ ಸಾಧನೆ ತೋರಿದ್ದಾಳೆ. ರಾಜ್ಯಮಟ್ಟದ ಹಾಕಿ ಟೂರ್ನಿಗಳಲ್ಲಿ ಉತ್ತಮ ಹಾಕಿ ಪಟು ಎನಿಸಿಕೊಂಡಿದ್ದು “ದೇಶವನ್ನು ಹಾಕಿಯಲ್ಲಿ ಪ್ರತಿನಿಧಿಸಲು ಶ್ರಮವಹಿಸುತ್ತಿದ್ದೇನೆ. ಶೀಘ್ರದಲ್ಲಿ ಗುರಿಸಾಧಿಸುವ ಭರವಸೆ ಇದೆ” ಎನ್ನುತ್ತಾಳೆ ಜೀವಿತ. ನಾಪೋಕ್ಲುವಿನ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿನಿಯಾಗಿರುವ ಜೀವಿತಾ ಬಾರಿಕೆ ನಂದಾ ಗಿರೀಶ್, ಸವಿತಾ ದಂಪತಿಗಳ ಪುತ್ರಿ. -ದುಗ್ಗಳ ಸದಾನಂದ