*ಗೋಣಿಕೊಪ್ಪಲು, ಡಿ. 25: ಸಂಚಾರ ನಿಯಮವನ್ನು ಅರಿತುಕೊಳ್ಳುವ ಮೂಲಕ ಚಾಲಕರು ಸುಭದ್ರತೆಯ ವಾಹನ ಚಾಲನೆಗೆ ಮುಂದಾಗುವ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸಹಕರಿಸ ಬೇಕು ಎಂದು ಗೋಣಿಕೊಪ್ಪಲು ಠಾಣಾಧಿಕಾರಿ ಸುರೇಶ್ ಬೋಪಣ್ಣ ಸಲಹೆ ನೀಡಿದರು.

ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ, ಆಟೋ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸುರಕ್ಷ ಸಲಹೆಗಳ ಕರಪತ್ರ ಹಂಚುವ ಮೂಲಕ ಮಾಹಿತಿ ನೀಡಿದರು.

ಕರಪತ್ರದಲ್ಲಿರುವ ಸುಮಾರು 13 ಸಲಹೆಗಳನ್ನು ಪಾಲಿಸುವ ಮೂಲಕ ವಾಹನ ಸಂಚಾರ ನಿಯಮ ಪಾಲಿಸುವಂತೆ ತಿಳಿಸಿದರು.

ಈ ಸಂದರ್ಭ ಸಹಾಯಕ ಠಾಣಾಧಿಕಾರಿ ಎಂ.ಸಿ. ನಂಜಪ್ಪ, ಪೆÇಲೀಸ್ ಸಿಬ್ಬಂದಿ ಮಂಜುನಾಥ್ ಸೇರಿದಂತೆ ಆಟೋ ಚಾಲಕರು ಹಾಗೂ ಸಾರ್ವಜನಿಕರು ಹಾಜರಿದ್ದರು.