ಸುಂಟಿಕೊಪ್ಪ, ಡಿ. 25: ಸುಂಟಿಕೊಪ್ಪದ ಹೃದಯ ಭಾಗದಲ್ಲಿ ರುವ ಇತಿಹಾಸ ಪ್ರಸಿದ್ಧವಾದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆ ಕಾಮಗಾರಿ ಭರದಿಂದ ಸಾಗುತ್ತಿದೆ.

ಶತಮಾನದ ಹಿಂದೆ ಸುಂಟಿಕೊಪ್ಪದಲ್ಲಿ ಹಿರಿಯರ ಆಶಯದಂತೆ ಸಣ್ಣಪ್ರಮಾಣದಲ್ಲಿ ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವರ ಗುಡಿ ಸ್ಥಾಪನೆಯಾಯಿತು. ಊರಿನ ಜನರು ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯ ವನ್ನು ನಡೆಸುತ್ತಾ ವಾರ್ಷಿಕ ಜಾತ್ರೋತ್ಸವವನ್ನು ನೆರವೇರಿಸುತ್ತಾ ದೇವರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು.

ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ನಾಗರಹಾವು ಬಂದು ಚಾಮುಂಡೇಶ್ವರಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಿ ಹಿಂತೆರಳುತ್ತಿದರು ದೇವಾಲಯದಲ್ಲಿ ನಿತ್ಯ ಪೂಜೆ ವಾರ್ಷಿಕ ಜಾತ್ರೋತ್ಸವ ಕೋಲವನ್ನು ವಿಜೃಂಭಣೆಯಿಂದ ದೇವಾಲಯದ ಆಡಳಿತ ಮಂಡಳಿ ನಡೆಸಿಕೊಂಡು ಬರುತ್ತಿದ್ದು; ಆನಂತರ ದೇವಾಲಯ ಕೆಡವಿ ನೂತನ ದೇವಾಲಯ ವಿಗ್ರಹ ಪ್ರತಿಷ್ಠಾಪನೆ ಮಾಡಲು ತೀರ್ಮಾನಿ ಸಿದ ಮೇರೆಗೆ ಅಷ್ಟಮಂಗಲ ಪ್ರಶ್ನೆ ಇರಿಸಲಾಯಿತು.

ಶ್ರೀಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯ ಸನ್ನಿಧಿಯಲ್ಲಿ ಹಲವು ದೋಷಗಳು ಇದ್ದಿದ್ದು ಕಂಡು ಬಂತು. ಇದೀಗ ದೇವಾಲಯವನ್ನು 1 ಕೋಟಿ ರೂ ವೆಚ್ಚದಲ್ಲಿ ಜೀರ್ಣೋ ದ್ಧಾರ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ಮುಗಿದಿದೆ. ಕಾರ್ಕಳದ ಶಿಲ್ಪಿ ರೋಹಿತ್ ತಂಡ ದೇವಾಲಯವನ್ನು ಸುಂದರ ವಿನ್ಯಾಸದಲ್ಲಿ ಕೆತ್ತಿ ನಿರ್ಮಿಸುತ್ತಿದ್ದಾರೆ. ಇನ್ನಷ್ಟು ಧನ ಸಹಾಯದ ಅಗತ್ಯತೆಯಿದ್ದು, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ ಹಾಗೂ ಪದಾಧಿಕಾರಿಗಳು ಊರಿನವರು, ಪರ ಊರಿನವರು ಗಣ್ಯರು ಜೀರ್ಣೋದ್ಧಾರ ಕಾರ್ಯಕ್ಕೆ ಸಹಾಯ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ದಾನಿಗಳು ಶ್ರೀಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯ ಜೀರ್ಣೋದ್ಧಾರ ಸಮಿತಿ ಕರ್ನಾಟಕ ಬ್ಯಾಂಕ್ ಸುಂಟಿಕೊಪ್ಪ ಶಾಖೆ ಖಾತೆ ಸಂಖ್ಯೆ 7112500102492001 ಸಹಾಯ ಧನ ಐಎಫ್‍ಎಸ್‍ಸಿ ಕೋಡ್ ನಂ. ಕೆಎಆರ್‍ಬಿ0000711 ಕಳುಹಿಸಬಹುದು ಎಂದು ಸಮಿತಿ ಕೋರಿದೆ.

- ಬಿ.ಡಿ. ರಾಜು ರೈ