ಮಡಿಕೇರಿ, ಡಿ. 24: ವೀರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಬೃಹತ್ ವೇದಿಕೆ ಸಿದ್ಧವಾಗಿದೆ. ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ತಾ. 25ರಂದು ಕ್ರಿಸ್ಮಸ್ ರಜೆ ಇರುವುದರಿಂದ ಶಿಕ್ಷಕ ಸತೀಶ್ ಸಿ.ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಾ. 26ರಂದು ನಡೆಯುವ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಸಕಲ ಪರಿಕರಗಳನ್ನು ಜೋಡಿಸಿಕೊಂಡು 4 ವಿಧಾನಗಳಲ್ಲಿ ಶೋಧಕದ ಮೂಲಕ ಗ್ರಹಣ ವೀಕ್ಷಣೆಯ ಪ್ರಾತ್ಯಕ್ಷಿಕೆ ನಡೆಸಿದರು.

ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಅಷ್ಟೇ ಈ ಕುರಿತು ಬೇರೆ ಯಾವುದೇ ಮೂಢ ನಂಬಿಕೆಗಳನ್ನು ಆಚರಿಸಬಾರದು ಬರಿಗಣ್ಣಿನಿಂದ ಸೂರ್ಯನನ್ನು ನೋಡಲಾಗದು ಹಾಗೆಯೇ ಗ್ರಹಣ ಕೂಡ ನೋಡಲಾಗುವುದಿಲ್ಲ ಗ್ರಹಣಕಾಲದಲ್ಲಿ ವಿಷಪೂರಿತ ಕಿರಣಗಳು ಬರುತ್ತವೆ ಎಂಬ ಮೂಢನಂಬಿಕೆ ಕೆಲವರಲ್ಲಿದೆ ಅದು ತಪ್ಪು ಸೂರ್ಯನಿಂದ ಯಾವಾಗಲೂ ಅವೆಗೆಂಪು ಮತ್ತು ನೇರಳಾತೀತ ಕಿರಣಗಳೆ ಬರುವುದು ಓಜೋನ್ ಅದನ್ನು ಬಿಳಿ ಕಿರಣವಾಗಿ ಪರಿವರ್ತಿಸುತ್ತದೆ ಶೋಧಕದ ಮೂಲಕ ಗ್ರಹಣ ವೀಕ್ಷಣೆ ಮಾಡಿದರೆ ಗರ್ಭಿಣಿಯರಿಗೆ ಏನೂ ತೊಂದರೆ ಇಲ್ಲ ಗ್ರಹಣದ ದಿನ ರಾಹು-ಕೇತು ಸೂರ್ಯ-ಚಂದ್ರನ ನುಂಗುತ್ತದೆ ಎಂಬುದು ಕೂಡ ತಪ್ಪು ಪರಿಕಲ್ಪನೆ ಗ್ರಹಣ ದಿನದಂದು ನದಿಯಲ್ಲಿ ಮುಳುಗಿ ಸ್ನಾನ ಮಾಡುವುದು ಜಪ-ತಪ ಉಪವಾಸ ವ್ರತವನ್ನು ಆಚರಿಸುವುದಕ್ಕಿಂತ ಖಗೋಳದಲ್ಲಿ ನಡೆಯುವ ಅಪರೂಪದ ಘಟನೆಯನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸತೀಶ್ ಕರೆ ನೀಡಿದರು. ನಾಳೆಯ ಗ್ರಹಣವನ್ನು ವೀಕ್ಷಿಸಲು ಶಾಲೆಯಲ್ಲಿ ಸೂರ್ಯನ ಪ್ರಕರ ನೇರ ಕಿರಣಗಳು ಬೀಳದಂತೆ ಶೇಡ್ ನೆಟ್ ಬಳಸಿ ವೇದಿಕೆ ನಿರ್ಮಿಸಲಾಗಿದೆ ಅಲ್ಲದೆ ಎಕ್ಸರೆ ಹಾಳೆಯ ಮೂರು ಮಡಿಕೆಗಳನ್ನು ಮಾಡಿ ಪ್ರತಿ ವಿದ್ಯಾರ್ಥಿಗೂ ಕನ್ನಡಕ ತಯಾರಿಸಲಾಗಿದೆ. ಅಲ್ಲದೆ ಹಲವಾರು ದರ್ಪಣಗಳನ್ನು ಬಳಸಿಕೊಂಡು ಅವುಗಳ ಪ್ರತಿಬಿಂಬವನ್ನು ಪರದೆ ಮೇಲೆ ಮೂಡಿಸಿ ಗ್ರಹಣ ವೀಕ್ಷಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ತರಗತಿ ಕೋಣೆಯೊಳಗೆ ಪಿನ್ ಹೋಲ್ ಮೂಲಕ ನೋಡಲು ಕೂಡ ವ್ಯವಸ್ಥೆ ಮಾಡಲಾಗಿದೆ ಬಕೆಟ್ ಗಳಲ್ಲಿ ಸಗಣಿ ಕಲಸಿ ಗಾಡ ಬಣ್ಣದಲ್ಲಿ ಸೂರ್ಯಗ್ರಹಣದ ಪ್ರತಿಬಿಂಬ ವೀಕ್ಷಿಸುವ ಎಲ್ಲಾ ಸಾಧ್ಯತೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯವನ್ನು ಇಂದು ಮಾಡಲಾಯಿತು .