ಡೆಕಥ್ಲಾನ್ ಕ್ರೀಡೆಯು ಅಥ್ಲೆಟಿಕ್ಸ್‍ನಲ್ಲಿ ಬರುವ ಒಂದು ಮಹಾಸ್ಪರ್ಧೆ. ಇಲ್ಲಿ ಕ್ರೀಡಾಪಟುವಿಗೆ ಸವಾಲುಗಳ ಗುರಿಯೇ ಇರುತ್ತದೆ. ಈ ಸ್ಪರ್ಧೆ ಓಟ. ಎಸೆತ, ಜಿಗಿತಗಳ ಸಮ್ಮಿಶ್ರಣ ಕ್ರೀಡೆಯಾಗಿದೆ. ಅಂದರೆ ಒಬ್ಬ ಕ್ರೀಡಾಪಟು ಕೇವಲ ಓಟದಲ್ಲಿ ಮಾತ್ರ ಪರಿಣಿತನಾದರೆ ಸಾಲದು, ಆತ ಎಸೆತದಲ್ಲೂ ಪ್ರಬುದ್ಧನಾಗಿರ ತಕ್ಕದ್ದು, ಜೊತೆಗೆ ಜಿಗಿತದಲ್ಲೂ ಅತ್ಯುತ್ತಮ ಸಾಮಥ್ರ್ಯ ಹೊಂದಿರಬೇಕು. ಸ್ಪರ್ಧೆಗಳಲ್ಲೂ ವಿವಿಧತೆ ಇದ್ದು, ಅವುಗಳಲ್ಲಿ ಕಠಿಣ ಅಭ್ಯಾಸದಿಂದ ಸಾಧನೆ ಗಳನ್ನು ಮಾಡಬೇಕಾಗುತ್ತದೆ. ಕೇವಲ ಓಟದಲ್ಲಿ ಪರಿಣತಿ ಸಾಧಿಸಿ ಅದರಲ್ಲಿ ಮಾತ್ರ ಸಾಧನೆ ಮಾಡಿದರೆ ಆತ ಡೆಕಥ್ಲಾನ್ ಕ್ರೀಡಾಪಟು ಅನ್ನಿಸಿಕೊಳ್ಳಲಾರ.
ಡೆಕಥ್ಲಾನ್ ಹತ್ತು ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಇಲ್ಲಿ 100 ಮೀ. ಓಟ, ಲಾಂಗ್‍ಜಂಪ್, ಗುಂಡು ಎಸೆತ, ಎತ್ತರ ಜಿಗಿತ, 400 ಮೀ., 110 ಮೀ. ಹರ್ಡ್‍ಲ್ಸ್ ಚಕ್ರ ಎಸೆತ, ಪೋಲ್‍ವಾಲ್ಟ್, ಜಾವೆಲಿನ್ ಎಸೆತ, 1500 ಮೀ. ಓಟ ಸ್ಪರ್ಧೆಗಳನ್ನು ಹೊಂದಿರುತ್ತದೆ. ಈ ಸ್ಪರ್ಧೆಯು ಸತತ 2 ದಿನಗಳ ಕಾಲ ನಡೆಯುತ್ತದೆ. ವಿಜೇತರನ್ನು ಒಟ್ಟಾರೆಯಾಗಿ ಸಂಯೋಜಿತ ಪ್ರದರ್ಶನದಿಂದ ನಿರ್ಧರಿಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಪ್ರತಿ ಅಂಕಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೆ, ಕ್ರೀಡಾಪಟುಗಳು ಸಾಧಿಸಿದ ಸ್ಥಾನ ಇಲ್ಲಿ ಗಣನೆಗೆ ಬರುವದಿಲ್ಲ.
ಡೆಕಥ್ಲಾನ್ ಸ್ಪರ್ಧೆಯ ಇತಿಹಾಸ : ಡೆಕಥ್ಲಾನ್ ಎಂಬ ಪದವು ಗ್ರೀಕ್ ಮೂಲದ್ದಾಗಿರುತ್ತದೆ. ಡೆಕ ಅಂದರೆ ಹತ್ತು ಅಥ್ಲಾನ್. ಅಂದರೆ ಸಾಧನೆ ಎಂಬ ಅರ್ಥವನ್ನು ಕೊಡುತ್ತದೆ. ಡೆಕಥ್ಲಾನ್ ಸ್ಪರ್ಧೆಯು ಮುಖ್ಯವಾಗಿ ಪುರುಷ ಕ್ರೀಡಾಪಟುಗಳಿಂದ ಸ್ಪರ್ಧಿಸಲ್ಪಡುತ್ತದೆ. ಮಹಿಳಾ ಕ್ರೀಡಾಪಟುಗಳು ಕೂಡ ವಿಶಿಷ್ಟವಾದ ಹೆಪ್ಟಥ್ಲಾನ್‍ನಲ್ಲಿ ಸ್ಪರ್ಧಿಸುತ್ತಾರೆ. ಇಲ್ಲಿ ಎಲ್ಲಾ ಸ್ಪರ್ಧೆಗಳು ರೋಚಕವಾಗಿರುತ್ತದೆ ಸಾಂಪ್ರಾದಾಯಿಕವಾಗಿ ಒಲಿಂಪಿಕ್ಸ್‍ನಲ್ಲಿ ಡೆಕಥ್ಲಾನ್ ಸ್ಪರ್ಧೆಯನ್ನು ಗೆಲ್ಲುವ ಕ್ರೀಡಾಪಟುಗಳಿಗೆ ವಲ್ರ್ಡ್ ಗ್ರೇಟೆಸ್ಟ್ ಅಥ್ಲೀಟ್ ಪ್ರಶಸ್ತಿ ಯನ್ನು ನೀಡಲಾಗುವದು. ಈ ಸ್ಪರ್ಧೆಯಲ್ಲಿ ಗೆಲ್ಲುವದು ಮಹಾಸಾಧನೆಯೇ ಸರಿ.
ಡೆಕಥ್ಲಾನ್ ಸ್ಪರ್ಧೆಯು ಪ್ರಾಚೀನÀ ಒಲಿಂಪಿಕ್ಸ್‍ನಲ್ಲಿ ಪೆಂಟ್‍ಥ್ಲಾನ್‍ನಿಂದ ಬೆಳವಣಿಗೆ ಕಂಡಿತು. ಸ್ಪರ್ಧೆಗಳನ್ನು 5 ವಿಭಾಗಗಳಾಗಿ ವಿಂಗಡಿಸಲಾಯಿತು. (ಲಾಂಗ್‍ಜಂಪ್, ಡಿಸ್ಕಸ್ ಥ್ರೋ, ಜಾವೆಲಿನ್, ಥ್ರೊ ಸ್ಫ್ರಿಂಟ್ ಹಾಗೂ ಕುಸ್ತಿ ಪಂದ್ಯ) ವಿಂಗಡಿಸಲಾಗಿತ್ತು. ಕ್ರಿ.ಪೂ. 708ರಲ್ಲಿ ಒಲಂಪಿಯಾದಲ್ಲಿ ಪರಿಚಯಿಸಲ್ಪಟ್ಟ ಈ ಸ್ಪರ್ಧೆಯು ಅನೇಕ ಶತಮಾನಗಳಿಂದ ಬಹಳ ಜನಪ್ರಿಯವಾಗಿತ್ತು ಹಾಗೂ ಕ್ರಿ. ಪೂ. 6ನೇ ಶತಮಾನದವರೆಗೆ ಈ ಕ್ರೀಡೆಗಳು ಧಾರ್ಮಿಕ ಆಟಗಳ ಭಾಗವಾಗಿತ್ತು. 1884ರಲ್ಲಿ ಅಮೇರಿಕಾದ ಸಂಯುಕ್ತ ಸಂಸ್ಥಾನದ ಚಾಂಪಿಯನ್‍ಶಿಪ್‍ಗಳಲ್ಲಿ ಆಧುನಿಕ ಡೆಕಥ್ಲಾನ್ ಹೋಲುವ ಹತ್ತು ಸ್ಪರ್ಧೆಗಳನ್ನು ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಆದರೂ ಈ ಸ್ಪರ್ಧೆ ಸೇರ್ಪಡೆಯಾಗಲಿಲ್ಲ. ಆಧುನಿಕ ಡೆಕಥ್ಲಾನ್ ಸ್ಪರ್ಧೆಯನ್ನು ಮೊದಲ ಬಾರಿಗೆ 1912ರ ಸ್ಟಾಕ್‍ಹೋಮ್ ಒಲಿಂಪಿಕ್ಸ್‍ನಲ್ಲಿ ಅಧಿಕೃತವಾಗಿ ಸೇರ್ಪಡಿಸಲಾಯಿತು.
ಆಧುನಿಕ ಒಲಿಂಪಿಕ್ಸ್‍ನಲ್ಲಿ 24ರಲ್ಲಿ 14 ಬಾರಿ ಯು.ಎಸ್.ಎ. ಕ್ರೀಡಾ ಪಟುಗಳು ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ. ಹಾಗೂ 12 ಬಾರಿ ಒಲಿಂಪಿಕ್ಸ್‍ನ ದಾಖಲೆಗಳನ್ನು ಮುರಿದಿದ್ದಾರೆ. ಯು.ಎಸ್.ಎನ್. ಬಾಬ್ ಮಥಿಯಾಸ್ (1948-1952), ಬ್ರಿಟನ್‍ನ ಡೇಲಿ ಥಾಂಪ್ಸ್ (1980-1984) ಹಾಗೂ ಯು.ಎಸ್.ಎ.ನ ಆಷ್ಟನ್ ಇಟನ್ (2012-2016)ರಲ್ಲಿ ಎರಡು ಬಾರಿ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಡೆಕಥ್ಲಾನ್ ದಾಖಲೆಯು 2018ರಲ್ಲಿ ಡೆಕ್‍ಸ್ಟಾರ್‍ಟ್ಯಾಲೆನ್ಸ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಫ್ರಾನ್ಸ್‍ನ ಕೆ. ಎನ್. ಮೇಯರ್ 1926 ಪಾಯಿಂಟ್ಸ್‍ಗಳನ್ನುಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 2004ರಲ್ಲಿ ಅಥ್ಲೇನ್‍ನಲ್ಲಿ ನಡೆದ ಒಲಂಪಿಕ್ಸ್‍ನಲ್ಲಿ ಜೆಕ್‍ರಿಪಬ್ಲಿಕ್‍ನ ರೋಮನ್ ಸೆಬ್ರೆಲ್ ಹಾಗೂ 2016ರಲ್ಲಿ ಬ್ರೆಜಿಲ್ ದೇಶದ ರಿಯೋ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಯು.ಎಸ್.ಎ.ನ ಅಪ್ಟನ್ ಇಟನ್‍ರವರು 8893 ಅಂಕಗಳೊಂದಿಗೆ ಒಲಿಂಪಿಕ್ಸ್ ದಾಖಲೆಯನ್ನು ಹೊಂದಿದ್ದಾರೆ.
ಸರ್ವಕಾಲಿಕ ಶ್ರೇಷ್ಠ 10 ಡೆಕಥ್ಲಾನ್ ಕ್ರೀಡಾಪಟುಗಳು : ಸರ್ವಕಾಲೀನ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಕೆವಿನ್ ಮೇಯರ್ (ಫ್ರಾನ್ಸ್‍ದೇಶ), ಆಷ್ಯಸ್ ಇಟನ್ (ಯು.ಎಸ್.ಎ.), ರೋಮನ್ ಸಬ್ರೆಲ್ (ಜೆಕ್‍ರಿಪಬ್ಲಿಕ್), ತೋಮಸ್‍ಡಿವ್‍ರೊಕಾ (ಜೆಕ್‍ರಿಪಬ್ಲಿಕ್), ಡಾನ್ ಬ್ರೀಯನ್ (ಯು.ಎಸ್.ಎ.), (ಟಾಲೆನ್ಸ್), ಡೇಲಿಥಾಂಪ್ಸನ್ (ಬ್ರಿಟನ್), ಜುಗ್ರೇನ್‍ಹಿಂಗ್ನ್ಸ್‍ಯನ್ (ಪೋರ್ಚುಗಲ್), ಬ್ರ್ಯಾನ್‍ಕ್ಲೇ (ಯು.ಎಸ್.ಎ.), ಇರ್ಕಿನೂಲ್ (ಇಸ್ಟೋನಿಯಾ), ಡಾಮಿಯನ್ ವಾರ್ನರ್ (ಕೆನಡಾ) ಇವರೆಲ್ಲಾ ಡೆಕಥ್ಲಾನ್ ನಲ್ಲಿ ಅಧಿಕ ಅಂಕಗಳನ್ನು ಗಳಿಸಿ ವಿಶ್ವದಲ್ಲೇ ಹೆಸರು ಮಾಡಿದವರು. ಮಹಿಳಾ ಕ್ರೀಡಾಪಟುಗಳು ಈಗ ಸಾಧನೆಗಳಲ್ಲಿ ಮಿಂಚುತ್ತಿದ್ದಾರೆ. ಒಲಿಂಪಿಕ್ಸ್‍ನಲ್ಲಿ ಹೆಸರುಗಳಿಸುವದು, ಸಾಧನೆ ಮಾಡಿ ಪದಕ ಪಡೆಯುವದು ಮಹಾಸಾಧನೆ ಯಾಗಿದೆ. ಭಾರತದಲ್ಲೂ ಡೆಕಥ್ಲಾನ್‍ನಲ್ಲಿ ಅತ್ಯುತ್ತಮ ಕ್ರೀಡಾಪಟುಗಳಿದ್ದಾರೆ, ವಿಶ್ವಮಟ್ಟದಲ್ಲಿ ಸಾಧಿಸಬೇಕಾಗಿರುವದು. ಒಲಿಂಪಿಕ್ಸ್‍ನಲ್ಲಿ ಪದಕಗಳಿಸಿ ಸಾಧನೆ ಮಾಡ ಬೇಕಾಗಿದೆ. ವಿಶ್ವದ ಅತ್ಯಂತ ಕುತೂಹಲ, ಸಾಹಸೀ, ಪ್ರಬಲ ಸವಾಲಿನ ಸ್ಪರ್ಧೆಗಳಲ್ಲಿ ಡೆಕಥ್ಲಾನ್ ಒಂದು. ಈ ಸಾಧನೆ, ವಿಜೇತರಾಗುವದು ಮಹಾಸಾಧನೆ ಎನ್ನಿಸುವದು. ಡೆಕಥ್ಲಾನ್‍ನಲ್ಲಿ ಭಾರತವು ಒಲಂಪಿಕ್ಸ್‍ನಲ್ಲಿ ಸಾಧನೆ ಮಾಡಿ ಪದಕಗಳಿಸು ವಂತಾಗಲಿ.
-ಹರೀಶ್‍ಸರಳಾಯ, ಮಡಿಕೇರಿ.