ಶನಿವಾರಸಂತೆ: ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯ ಗೋಲ್ಡನ್ ಸ್ಕೂಲ್ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಹಾಗೂ ವಸ್ತು ಪ್ರದರ್ಶನ ನಡೆಯಿತು.
ವಿದ್ಯಾರ್ಥಿಗಳು ಮನೆಯ ಹಿತ್ತಲಲ್ಲಿ ಬೆಳೆದ ವಿವಿಧ ಬಗೆಯ ತರಕಾರಿ, ಸೊಪ್ಪು, ಹಣ್ಣು-ಹಂಪಲು, ಮನೆಯಲ್ಲೇ ತಯಾರಿಸಿದ ತಿಂಡಿ-ತಿನಿಸು, ಪಾನಿಪೂರಿ, ಗೋಬಿ ಮಂಚೂರಿ, ಚುರುಮುರಿ ಇತ್ಯಾದಿಗಳನ್ನು ವ್ಯಾಪಾರ ಮಾಡಿ ಗಮನ ಸೆಳೆದರು. ಪೋಷಕರು, ಶಿಕ್ಷಕರು ಗ್ರಾಹಕರಾಗಿ ಖರೀದಿಸಿದರು. ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಉಪನ್ಯಾಸಕರು ಹಾಜರಿದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಲಾಪುರ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಟಿ. ಗಿರೀಶ್ ನೆರವೇರಿಸಿದರು. ಮಕ್ಕಳಲ್ಲಿ ವ್ಯವಹಾರ ಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಒದಗುತ್ತದೆ. ಮುಂದಿನ ದಿನಗಳಲ್ಲಿ ತಮ್ಮ ದೈನಂದಿನ ಬದುಕಿಗೆ ಈ ಎಲ್ಲಾ ಬೆಳವಣಿಗೆಗಳು ಪೂರಕವಾಗುತ್ತವೆ ಎಂದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು ವಿವಿಧ ತರಕಾರಿ ತಿಂಡಿಗಳನ್ನು ಮಾರಾಟ ಮಾಡಿದರು. ಈ ಸಂದÀರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಲ್ಪನ, ದಿನೇಶ್ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕಿ ಸಹ ಶಿಕ್ಷಕಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.
ಶಿರಂಗಾಲ: ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳ ಸಂತೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ಮಕ್ಕಳ ವ್ಯಾವಹಾರಿಕ ಜ್ಞಾನಕ್ಕೆ ಈ ತರಹದ ಕಾರ್ಯಕ್ರಮಗಳು ಪೂರಕವಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನದ ಮೂಲಕ ಮುಂದಿನ ಜೀವನದ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಎಸ್. ಕೃಷ್ಣ, ಮುಖ್ಯ ಶಿಕ್ಷಕ ಸೋಮಯ್ಯ, ಪ್ರೌಢಶಾಲಾ ವಿಭಾಗದ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂತೆಯಲ್ಲಿ ಸುಮಾರು 35 ಅಂಗಡಿಗಳು ಇದ್ದವು. ಎಲ್ಲಾ ತರಹದ ಅಂಗಡಿಗಳು ಇದ್ದದ್ದು ವಿಶೇಷ. ತರಕಾರಿ ಅಂಗಡಿ ತಿಂಡಿ ತಿನಿಸುಗಳ ಅಂಗಡಿ ಐಸ್‍ಕ್ರೀಮ್ ಹೊಟೇಲ್ ಮೊದಲಾದವು ಇದ್ದವು.