ಮಡಿಕೇರಿ, ಡಿ. 25: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಸಹಕಾರದೊಂದಿಗೆ ಚಿತ್ರದುರ್ಗ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಆಯೋಜಿಸಿದ್ದ 39ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಿಲ್ಲೆಯ ಮಡಿಕೇರಿ ವಿಶಾಲಾಕ್ಷಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಚಿತ್ರದುರ್ಗ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟ 5 ಕಿ.ಮೀ. ನಡಿಗೆಯಲ್ಲಿ ಚಿನ್ನ, ಜಾವಲಿನ್ ಎಸೆತದಲ್ಲಿ ಬೆಳ್ಳಿ ಹಾಗೂ 200 ಮೀ. ಓಟದಲ್ಲಿ ಕಂಚಿನ ಪದಕಗಳಿಸಿದ್ದಾರೆ. ಮುಂಬರುವ ಜನವರಿಯಲ್ಲಿ ಕ್ಯಾಲಿಕಟ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ವಿಶಾಲಾಕ್ಷಿ ಮಡಿಕೇರಿಯಲ್ಲಿ ಗೃಹರಕ್ಷಕ ದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.