*ಗೋಣಿಕೊಪ್ಪಲು, ಡಿ. 25: ಶ್ರೀ ರಾಮಸೇನೆ ಯುವಕ ಸಂಘ ಆಯೋಜಿಸಿದ ಪ್ರಥಮ ವರ್ಷದ ಜಿ.ಸಿ.ಎಫ್. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯದ ವಿಜೇತರಾಗಿ ವಿರಾಟ್ ಕ್ರಿಕೆಟರ್ಸ್ ಹೊರಹೊಮ್ಮಿದೆ. ದ್ವಿತೀಯ ಸ್ಥಾನಕ್ಕೆ ಮೈಟಿ ಕ್ರಿಕೆಟರ್ಸ್ ತಂಡ ತೃಪ್ತಿಪಟ್ಟುಕೊಂಡಿದೆ.
ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು 9 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಮೈಟಿ ಕ್ರಿಕೆಟರ್ಸ್ ಮತ್ತು ವಿರಾಟ್ ಕ್ರಿಕೆಟರ್ಸ್ ತಂಡದ ನಡುವೆ ಹಣಾಹಣಿ ನಡೆಯಿತು. ಪಂದ್ಯದಲ್ಲಿ ಮೈಟಿ ಕ್ರಿಕೆಟರ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 4 ಓವರ್‍ಗಳಲ್ಲಿ 34 ರನ್‍ಗಳನ್ನು ಬಾರಿಸಿತು. ವಿರಾಟ್ ಕ್ರಿಕೆಟರ್ಸ್ 34 ರನ್‍ಗಳನ್ನು ಬೆನ್ನಟ್ಟಿ 3 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಂಡದ ನಾಯಕ ಗಗನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ 22,222 ನಗದು, ಟ್ರೋಫಿ ಹಾಗೂ ದ್ವಿತೀಯ ಸ್ಥಾನಕ್ಕೆ 11,111 ನಗದು, ಟ್ರೋಫಿಯನ್ನು ಆಯೋಜಕರು ನೀಡಿದರು. ಪ್ರಥಮ ಸ್ಥಾನದ ನಗದು ಬಹುಮಾನವನ್ನು ದಿ. ಕೆ.ಕೆ. ಸೂರಜ್ ಅವರ ಜ್ಞಾಪಕಾರ್ಥವಾಗಿ ಅವರ ಗೆಳೆಯರ ಬಳಗ, ಟ್ರೋಫಿಯನ್ನು ಫೈನ್ ಕ್ಲಬ್ ಮಾಲೀಕ ಹುಸೈನ್ ನೀಡಿದ್ದು, ದ್ವಿತೀಯ ಸ್ಥಾನದ ನಗದು ಬಹುಮಾನವನ್ನು ವ್ಯಾಪಾರಿ ಉಂಬಾಯಿ, ಟ್ರೋಫಿಯನ್ನು ಕುಟ್ಟಂಡ ಮುದ್ದಪ್ಪ ಅವರು ನೀಡಿ ಪ್ರತಿಭೆಗಳಿಗೆ ಪೆÇ್ರೀತ್ಸಾಹ ನೀಡಿದರು. ಪಂದ್ಯಾಟದ ಅತ್ಯುತ್ತಮ ಆಟಗಾರರಾಗಿ ಮೈಟಿ ತಂಡದ ಅಫ್‍ಶಾದ್, ಸರಣಿ ಶ್ರೇಷ್ಟ ಶ್ರೀರಾಮ ಸೇನೆ ತಂಡದ ಸಂತೋಷ್ ಪಿಟ್ಟೆ, ಫೈನಲ್ ಪಂದ್ಯದ ಪಂದ್ಯ ಪುರೋಷತ್ತಮ ವಿರಾಟ್ ತಂಡದ ಗಗನ್, ಪಂದ್ಯಾವಳಿಯ ಶಿಸ್ತುಬದ್ದ ತಂಡ ಫುಡ್ ಬ್ಯಾಂಕ್ ಕ್ರಿಕೆಟರ್ಸ್ ಪಡೆದುಕೊಂಡಿತು.
ಶ್ರೀ ರಾಮಸೇನಾ ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಾಲಿಬೆಟ್ಟ, ಅವರ ಅಧ್ಯಕ್ಷತೆಯಲ್ಲಿ ವಿಜೇತರಿಗೆ ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಹಾಗೂ ಅತಿಥಿಗಳು ಟ್ರೋಫಿಯನ್ನು ವಿತರಿಸಿದರು. ನಂತರ ಮಾತನಾಡಿದ ವಿಜು ಸುಬ್ರಮಣಿ ಅವರು ಒತ್ತಡ ನಿಭಾಯಿಸಲು ಕ್ರೀಡೆಯಿಂದ ಸಾಧ್ಯ. ಕ್ರೀಡೆಗೆ ಹೆಚ್ಚು ಒತ್ತು ನೀಡುವ ಮೂಲಕ ತಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳಬೇಕು ಎಂದು ಹೇಳಿದರು. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳಿಗೆ ಹೆಚ್ಚು ಪೆÇ್ರೀತ್ಸಾಹ ದೊರೆತಾಗ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶ ಸಿಗುತ್ತದೆ ಎಂದರು.
ಜಾಂಬವ ಯುವ ಸೇನಾ ರಾಜ್ಯಾಧ್ಯಕ್ಷ ಡಾ. ರಮೇಶ್ ಚಕ್ರವರ್ತಿ ಮಾತನಾಡಿ ಕ್ರೀಡಾ ಪ್ರತಿಭೆಗಳನ್ನು ಅನಾವರಣಗೊಳಿಸುವ ಇಂತಹ ಕ್ರೀಡಾ ಚಟುವಟಿಕೆಗಳು ಯುವಕರಲ್ಲಿ ಉತ್ಸಾಹ ಮತ್ತು ಪೆÇ್ರೀತ್ಸಾಹ ತುಂಬಬಲ್ಲದು ಎಂದು ಹೇಳಿದರು. ಸಭಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ವ್ಯಾಪಾರಿ ಉಂಬಾಯಿ ಅವರನ್ನು ಸನ್ಮಾನಿಸಲಾಯಿತು.
ಹಾತೂರು ಗ್ರಾ.ಪಂ. ಸದಸ್ಯ ಕುಲ್ಲಚಂಡ ಚಿಣ್ಣಪ್ಪ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಜಮ್ಮಡ ಸೋಮಣ್ಣ, ಪತ್ರಕರ್ತ ಜಗದೀಶ್ ಜೋಡುಬೀಟಿ, ಸಮಾಜ ಸೇವಕರುಗಳಾದ ಕುಟ್ಟಂಡ ಮುದ್ದಪ್ಪ, ನಾಗೇಂದ್ರ ರೈ, ಸುದೀನ್ ಭಾಸ್ಕರ್, ಜಾಂಬವ ಯುವ ಸೇನೆ ಜಿಲ್ಲಾಧ್ಯಕ್ಷ ಸಿಂಗಿ ಸತೀಶ್, ತಾಲೂಕು ಅಧ್ಯಕ್ಷ ಹೆಚ್.ಎನ್. ರವಿ, ಭಗತ್‍ಸಿಂಗ್ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ವೇಣು, ಪಂದ್ಯಾವಳಿಯ ಸಂಘಟಕ ಹಾಟ್ ಐಂಡ್ ಕೂಲ್ ಮಾಲೀಕ ಶಾನಿಫ್ ಹಾಗೂ ಶ್ರೀರಾಮಸೇನೆ ಯುವಕ ಸೇನೆಯ ಪದಾಧಿಕಾರಿಗಳು ಹಾಜರಿದ್ದರು.
- ಎನ್.ಎನ್. ದಿನೇಶ್