ಸುಂಟಿಕೊಪ್ಪ, ಡಿ. 25: ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಅಧ್ಯಕ್ಷರಾಗಿ ಎಂ.ಟಿ. ಧನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ ಅವರನ್ನು ಪುನರ್ ಆಯ್ಕೆಗೊಳಿಸಲಾಯಿತು. ಕ್ಷೇತ್ರದ ಆವರಣದಲ್ಲಿ ಅಧ್ಯಕ್ಷ ಧನು ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರುಗಳಾಗಿ ಕೆ.ಎ. ಬಾಲಕೃಷ್ಣ, ಮುತ್ತಯ್ಯ, ಆರ್.ಟಿ. ಮೋಹನ್, ಟಿ.ಜಿ. ರಾಧಾಕೃಷ್ಣ, ಉಪಾಧ್ಯಕ್ಷರುಗಳಾಗಿ ಎ. ಶ್ರೀಧರನ್, ಬಿ.ಕೆ. ಪ್ರಶಾಂತ್ ಕುಮಾರ್, ಬಿ.ಎಲ್. ಆನಂದ, ಕಾರ್ಯದರ್ಶಿಯಾಗಿ ಎಂ.ಆರ್. ಶಶಿಕುಮಾರ್, ಖಜಾಂಚಿಯಾಗಿ ಬಿ.ಎಂ. ಸುರೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಬಿ.ಕೆ. ರಂಜಿತ್, ಅಣ್ಣು ಶೇಖರ್, ಪಿ. ಲೋಕೇಶ್, ಡಿ.ಕೆ. ರಾಕೇಶ್, ಎಂ. ಉದಯ, ಸಲಹಾ ಸಮಿತಿ ಸದಸ್ಯರಾಗಿ ಎಂ.ಆರ್. ಶಿವಮಣಿ, ವಿ.ಎ. ಸಂತೋಷ್, ಕೆ.ಪಿ. ವಿನೋದ್ ಹಾಗೂ ಸದಸ್ಯರುಗಳಾಗಿ ಕೆ. ರವಿ, ಎಂ. ಚಂದ್ರ, ಡಿ.ಕೆ. ರಜನೀಶ್, ಎಂ. ರಾಜ, ಆರ್ಟಿಸ್ಟ್ ಗಣೇಶ್, ಮಿಥುನ್, ರಂಗನಾಥ್ ಅವರುಗಳನ್ನು ಆಯ್ಕೆಗೊಳಿಸಲಾಯಿತು.