ಸುಂಟಿಕೊಪ್ಪ, ಡಿ. 25: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ರಹೆನಾ ಫೈರೋಜ್ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಆಶ್ರಯ ಮನೆಗೆ ಗ್ರಾ.ಪಂ. ನಿಂದ 1 ಲಕ್ಷದ 50 ಸಾವಿರ ಪಡೆದಿದ್ದು ಮನೆಯನ್ನು ನಿರ್ಮಿಸುವಾಗ ರಸ್ತೆ ಒತ್ತುವರಿಯಾಗಿದೆ ಎಂದು ಗ್ರಾ.ಪಂ. ಜಮಾಬಂಧಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಸದಸ್ಯೆ ರಹೆನಾ ಅವರು ತಾನು ರೂ. 15 ಲಕ್ಷದಲ್ಲಿ ಮನೆ ನಿರ್ಮಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ರೂ. 15 ಲಕ್ಷದ ಮನೆ ನಿರ್ಮಿಸಿದವರಿಗೆ ಆಶ್ರಯ ಮನೆಯ ಸಹಾಯಧನದ ಅವಶ್ಯಕತೆ ಇದೆಯೇ? ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಗ್ರಾ.ಪಂ. ಆಡಳಿತ ಮಂಡಳಿಯವರು ಬಡವರಿಗೆ ಸೇರಬೇಕಾದ ಆಶ್ರಯ ಮನೆಯ ಫಲಾನುಭವಿಗಳ ಸಹಾಯ ಧನ ಪಡೆದುಕೊಂಡು ಸದಸ್ಯೆ ರಹೆನಾ ಫೈರೋಜ್‍ರಿಂದ ಅನುದಾನವನ್ನು ಹಿಂದಕ್ಕೆ ಪಡೆದುಕೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ ಹಾಗೂ ದೀನು ಸಂತೋಷ್ ಪಂಚಾಯಿತಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.