ಮಡಿಕೇರಿ, ಡಿ. 22: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಎನ್‍ಪಿಆರ್‍ಪಿಡಿ ಯೋಜನೆಯಡಿ ಖಾಲಿ ಇರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು, ನಗರದ ಪುನರ್ವಸತಿ ಕಾರ್ಯಕರ್ತರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕತರ ಹುದ್ದೆಗಳಿಗೆ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ : 08272-295829 ನ್ನು ಸಂಪರ್ಕಿಸಬಹುದು. ಅರ್ಹತೆ; ಸ್ಥಳೀಯರಾಗಿರಬೇಕು. ಒಂದು ವೇಳೆ ಸ್ಥಳೀಯರು ಲಭ್ಯವಿಲ್ಲದಿದ್ದಲ್ಲಿ ಅಕ್ಕಪಕ್ಕದ ಗ್ರಾಮದವರಿಗೆ ಆದ್ಯತೆ ನೀಡಲಾಗುವುದು. ಶೇ.40 ಮೇಲ್ಪಟ್ಟು ಶೇ.75 ಕಡಿಮೆ ವಿಕಲಚೇತನತೆ ಇರುವ ವಿಕಲಚೇತನರು ಮಾತ್ರ ಅರ್ಹರು. ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಗೌರವಧನದ ಹುದ್ದೆಯಾಗಿದೆ. ವಯೋಮಿತಿ 18 ರಿಂದ 45 ವರ್ಷ ಹಾಗೂ ಅರ್ಜಿ ಸಲ್ಲಿಸಲು ಜನವರಿ, 20 ಕೊನೆ ದಿನವಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಸಂಪತ್ ಕುಮಾರ್ ತಿಳಿಸಿದ್ದಾರೆ.