ಮಡಿಕೇರಿ, ಡಿ. 23: ಕೊಡಗು ಜಿಲ್ಲೆಯಲ್ಲಿ ನಕಲಿ ಚಾಕಲೇಟ್ ಮಾರಾಟ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಕೊಡಗು ಜಿಲ್ಲಾ ಗ್ರಾಹಕರ ವೇದಿಕೆ ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರಮುಖರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಕೆಲವು ಪ್ರವಾಸಿ ಕೇಂದ್ರಗಳು ಹಾಗೂ ಹೆದ್ದಾರಿ ರಸ್ತೆ ಬದಿಯಲ್ಲಿ ವರ್ತಕರು ಅಂಗಡಿ ಮಳಿಗೆಗಳಲ್ಲಿ ನಿಯಮಬಾಹಿರವಾಗಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದು ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಇಲಾಖೆಯ ನಿಯಮ ಉಲ್ಲಂಘಿಸಿ ಮಾರಾಟ ಮಾಡಲಾಗುತ್ತಿದೆ. ಇಂತಹ ದಂಧೆಗಳಿಗೆ ಶಾಶ್ವತ ಕಡಿವಾಣ ಹಾಕಬೇಕೆಂದು ಗ್ರಾಹಕರ ವೇದಿಕೆಯ ಜಿಲ್ಲಾ ಅಧ್ಯಕ್ಷ ಎ.ಎ.ಚಂಗಪ್ಪ ಅಧಿಕಾರಿಗಳನ್ನು ಆಗ್ರಹಿಸಿದರು.
ಸ್ಥಳೀಯ ಪತ್ರಿಕೆ ಹಾಗೂ ವಿವಿಧ ಮಾಧ್ಯಮಗಳಲ್ಲಿ ನಕಲಿ ಚಾಕಲೆಟ್ ಮಾರಾಟದ ಬಗ್ಗೆ ವರದಿಯಾಗಿದ್ದರೂ ಅಧಿಕಾರಿಗಳ ಸೂಚನೆಯನ್ನು ಮೀರಿ ಕೆಲವೆಡೆ ಚಾಕಲೆಟ್‍ಗಳ ಮಾರಾಟ ದಂಧೆ ಮುಂದುವರೆದಿದೆ ಎಂದು ತಿಳಿಸಿದ ಕುಶಾಲನಗರ ಸುದ್ದಿ ಸೆಂಟರ್ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್, ಕುಶಾಲನಗರ ವಿವಿಧೆಡೆ ನಕಲಿ ಚಾಕಲೆಟ್‍ಗಳನ್ನು ತುಂಬಿರುವ ದಾಸ್ತಾನು ಕೇಂದ್ರಗಳು ಇರುವುದಾಗಿ ಮಾಹಿತಿ ನೀಡಿದರು.ಆಹಾರ ಇಲಾಖೆಯ ಸುರಕ್ಷತಾ ಅಧಿಕಾರಿಗಳು ಕೆಲವು ಅಂಗಡಿಗಳಿಗೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಂಡಿದ್ದರೂ ಇದನ್ನು ಲೆಕ್ಕಿಸದೆ ಕೆಲವೆಡೆ ದಂಧೆ ಮುಂದುವರೆದಿದೆ. ಕೂಡಲೆ ಇಂತಹ ಅಂಗಡಿಗಳನ್ನು ಪತ್ತೆಹಚ್ಚಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಹಾರ ಇಲಾಖೆಯ ಸುರಕ್ಷತಾ ಅಧಿಕಾರಿಗಳು ಕೆಲವು ಅಂಗಡಿಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದರೂ ಇದನ್ನು ಲೆಕ್ಕಿಸದೆ ಕೆಲವೆಡೆ ದಂಧೆ ಮುಂದುವರೆದಿದೆ. ಕೂಡಲೆ ಇಂತಹ ಅಂಗಡಿಗಳನ್ನು ಪತ್ತೆಹಚ್ಚಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಡಿಕೇರಿಯಿಂದ ಕುಶಾಲನಗರ ತನಕ ರಸ್ತೆ ಬದಿಯಲ್ಲಿರುವ ಕೆಲವು ಮಳಿಗೆಗಳಲ್ಲಿ ಗುಣಮಟ್ಟವಿಲ್ಲದ ವೈನ್ ಮತ್ತಿತರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ತಿಳಿಸಿದ ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷg ಅಚ್ಚಾಂಡಿರ ಪವನ್ ಪೆಮ್ಮಯ್ಯ, ಮಡಿಕೇರಿ ಸುತ್ತಮುತ್ತ ಪ್ರವಾಸಿ ಕೇಂದ್ರಗಳಲ್ಲಿ ಕೂಡ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಂಬಂಧಿಸಿದವರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ, ಮಡಿಕೇರಿ ಸುತ್ತಮುತ್ತ ಪ್ರವಾಸಿ ಕೇಂದ್ರಗಳಲ್ಲಿ ಕೂಡ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಂಬಂಧಿಸಿದವರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಗೌರವ್ ಶೆಟ್ಟಿ, ಈ ಪ್ರಕರಣದ ಬಗ್ಗೆ ಮಾಹಿತಿ ಇಲಾಖೆಗೆ ಒದಗಿಸಿದ್ದು ಈಗಾಗಲೆ ಇಲಾಖೆಯ ಸುರಕ್ಷತಾ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಶಾಶ್ವತ ಕಡಿವಾಣ ಹಾಕುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದರೊಂದಿಗೆ ಇಲಾಖೆಯಿಂದ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು. ಗ್ರಾಹಕ ವೇದಿಕೆಯ ಜಿಲ್ಲಾ ಖಜಾಂಚಿ ಗಿರೀಶ್, ಮಡಿಕೇರಿ ರಕ್ಷಣಾ ವೇದಿಕೆ ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಟೀನಾ, ಪ್ರಮುಖರಾದ ಉಮೇಶ್ ಗೌಡ, ಶ್ರೀನಿವಾಸ ರೈ, ಸತ್ಯ, ಪಾಪು, ರವಿ ಮತ್ತಿತರರು ಇದ್ದರು.