ನಾಪೆÇೀಕ್ಲು, ಡಿ. 22: ಸಮೀಪದ ಕೊಳಕೇರಿ ಗ್ರಾಮದ ಉಮಾಮಹೇಶ್ವರಿ ದೇವಳದ ಗಣಪತಿ ವಿಗ್ರಹ, ಹುಂಡಿ, ಬೆಳ್ಳಿ ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕಳ್ಳರು ದೋಚಿರುವ ಪ್ರಕರಣ ಶನಿವಾರ ರಾತ್ರಿ ನಡೆದಿದೆ.ಹುಂಡಿಯ ಬೀಗ ಮುರಿದು ಸುಮಾರು 40 ಸಾವಿರ ಹಣವನ್ನು ಕದ್ದಿರುವ ಕಳ್ಳರು, ಹೊರ ಭಾಗದಲ್ಲಿದ್ದ ಗಣಪತಿ ಗುಡಿಯ ಬೀಗ ಒಡೆದು ಒಳಗಿದ್ದ ಪಂಚಲೋಹದ ವಿಗ್ರಹವನ್ನು ಕದ್ದಿದ್ದಾರೆ. ಮುಖ್ಯ ಗರ್ಭಗುಡಿಯ ಬೀಗ ಒಡೆದಿದ್ದು, ಅಲ್ಲಿದ್ದ ಬೆಳ್ಳಿಯ ಒಂದು ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕದ್ದಿರುವದು ಬೆಳಕಿಗೆ ಬಂದಿದೆ. ಆದರೆ ಗರ್ಭಗುಡಿಯಲ್ಲಿದ್ದ ಗಣಪತಿ ದೇವರ ಪಾಣಿಪೀಠ ಮತ್ತು ಪ್ರಭಾವಳಿಯನ್ನು ಅಲ್ಲೇ ಬಿಟ್ಟಿದ್ದು, ಮುಖ್ಯ ಗರ್ಭಗುಡಿಯಲ್ಲಿದ್ದ ಶಿವಲಿಂಗದ ಪ್ರಭಾವಳಿ ಮತ್ತು ಅಲ್ಲಿದ್ದ ಉತ್ಸವ ಮೂರ್ತಿಯ ಪ್ರಭಾವಳಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿರುವದು ಕಂಡು ಬಂದಿದೆ.ಭಾನುವಾರ ಬೆಳಿಗ್ಗೆ 6 ಗಂಟೆ ಸಮಯಕ್ಕೆ ಮುಕ್ಕಾಟಿರ ಅಣ್ಣಯ್ಯ ಅವರು ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸುದ್ದಿ ಹಬ್ಬುತ್ತಿದ್ದಂತೆ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ರೆಮ್ಮಿ ನಾಣಯ್ಯ ಸೇರಿದಂತೆ ಎಲ್ಲಾ ಗ್ರಾಮಸ್ಥರು ದೇವಳದಲ್ಲಿ ಸೇರಿದರು.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ದಿವಾಕರ್, ಜಿಲ್ಲಾ ಅಪರಾಧ ಪತ್ತೆ ದಳದ ಎ.ಎಸ್.ಐ ಹಮೀದ್, ನಾಪೆÇೀಕ್ಲು ಠಾಣಾಧಿಕಾರಿ ಆರ್.ಮಂಚಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
-ಪಿ.ವಿ. ಪ್ರಭಾಕರ್, ದುಗ್ಗಳ ಸದಾನಂದ