ಚೆಟ್ಟಳ್ಳಿ, ಡಿ. 23: ಸೋಮವಾರಪೇಟೆ ತಾಲೂಕಿನ ಕೂಡಿಗೆ ವ್ಯಾಪ್ತಿಯಲ್ಲಿ ಮಕ್ಕಳ ಸಹಾಯವಾಣಿಯಿಂದ ಬಂದ ದೂರಿನ ಮೇರೆಗೆ ಕಾರ್ಯಾಚರಣೆ ತಂಡವು ಕೂಡಿಗೆ ವ್ಯಾಪ್ತಿಯ ವಿವಿಧ ಸಂಸ್ಥೆಗಳಲ್ಲಿ ತಪಾಸಣೆ ನಡೆಸಿತು. ಈ ಸಂದರ್ಭ ಹೊಟೇಲ್‍ವೊಂದರಲ್ಲಿ ಬಾಲಕನೊಬ್ಬ ಕೆಲಸ ಮಾಡುವುದನ್ನು ಪತ್ತೆಹಚ್ಚಿ ಬಾಲಕನನ್ನು ರಕ್ಷಣೆ ಮಾಡಲಾಯಿತು.

ತಪ್ಪಿತಸ್ಥ ಹೊಟೇಲ್ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಯಿತು. ಅಧಿಕಾರಿಗಳಾದ ಎಂ. ಮಹಾದೇವ ಸ್ವಾಮಿ, ಹಿರಿಯ ಕಾರ್ಮಿ ಕ ನಿರ್ದೇಶಕ ಮಹದೇವಸ್ವಾಮಿ, ಆರ್. ಶೀರಾಜ್ ಅಹ್ಮದ್, ಯೋಜನಾ ನಿರ್ದೇಶಕರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಕೊಡಗು ಜಿಲ್ಲೆ, ಮಡಿಕೇರಿ, ಮಹೇಶ್, ಮಕ್ಕಳ ಸಹಾಯವಾಣಿ ಸದಸ್ಯರು ಉಪಸ್ಥಿತರಿದ್ದರು.