ಗೋಣಿಕೊಪ್ಪಲು, ಡಿ. 22: ಸುಮಾರು ಒಂದು ಏಕರೆ ವಿಸ್ತ್ರೀರ್ಣದಲ್ಲಿ ತಿತಿಮತಿ ಪೊಲೀಸ್ ಉಪಠಾಣೆಯು ಇದೀಗ ಗೋಣಿಕೊಪ್ಪ ವೃತ್ತ ವ್ಯಾಪ್ತಿಗೆ ಒಳಪಡುತ್ತಿದ್ದಂತೆಯೇ ಕಾಡು ಸೇರಿದ್ದ ಠಾಣೆಯು ಇದೀಗ ಮಿರಮಿರ ಮಿಂಚುತ್ತಿದೆ.

ಸುಣ್ಣ ಬಣ್ಣ ಕಾಣದೆ ಕಾಡು ಕೂಡಿದ್ದ ಈ ಪೊಲೀಸ್ ಠಾಣೆ ಶುಚಿತ್ವ ಕಂಡಿದ್ದು ಗಿಡ ಗಂಟಿಗಳು ಇಲ್ಲದಂತಾಗಿದೆ. ಠಾಣೆಯ ಸುತ್ತ ಮುತ್ತಲು ಹೂವಿನ ಗಿಡಗಳಿಂದ ಕೂಡಿದ್ದು ಖಾಲಿ ಜಾಗವನ್ನು ಜೆಸಿಬಿ ಮೂಲಕ ದುರಸ್ಥಿ ಪಡಿಸಿ ಈ ಜಾಗದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಬಿಡುವಿನ ಸಮಯದಲ್ಲಿ ಆಟವಾಡಲು ಮೈದಾನ ಸಿದ್ದಗೊಂಡಿದೆ. ಠಾಣೆಯ ಹಿಂಭಾಗ ಸಂಪೂರ್ಣ ಕಸ ಮುಕ್ತಗೊಂಡಿದ್ದು ವಿಸ್ತ್ರೀರ್ಣವಾದ ಬಯಲಿನಂತೆ ಕಂಗೊಳಿಸುತ್ತಿದೆ. ಠಾಣೆಯ ಒಳಭಾಗದಲ್ಲಿ ರಾಷ್ಟ್ರದ ಮಹಾನಿಯರ ಭಾವಚಿತ್ರಗಳು ಕಂಗೊಳಿಸುತ್ತಿವೆ.

ಇತ್ತೀಚೆಗೆ ಗೋಣಿಕೊಪ್ಪ ವೃತ್ತಕ್ಕೆ ಈ ಠಾಣೆಯು ಒಳಪಟ್ಟ ನಂತರ ಠಾಣೆಯ ಜವಾಬ್ದಾರಿ ನಿಭಾಯಿಸಲು ನೇಮಕಗೊಂಡ ಪೊಲೀಸ್ ರೈಟರ್ ಸುರೇಂದ್ರ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳು ಭೇಷ್ ಎಂದಿದ್ದಾರೆ.

ವಿಸ್ತಾರವಾದ ಪ್ರದೇಶಗಳಲ್ಲಿ ಹೆಚ್ಚಾಗಿ ಆದಿವಾಸಿಗಳೇ ವಾಸಿಸುವ ಸುತ್ತ ಮುತ್ತಲ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಲಭ್ಯವಿರುವ ಸಿಬ್ಬಂದಿಗಳ ಸಹಕಾರದಿಂದ ನಿರಂತರ ಭೇಟಿ ನೀಡುವುದು ಬಡ ಜನತೆಯ ಕಷ್ಟ ಆಲಿಸುವುದು; ಗಂಭೀರ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಬಗ್ಗೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮಾಡುತ್ತಿದ್ದಾರೆ.

ಬಹಳ ಹಳೆಯದಾದ ಕಟ್ಟಡವನ್ನು ಸಾರ್ವಜನಿಕರ ಸಹಕಾರ ಪಡೆದು ಸುಸ್ಸಜ್ಜಿತವಾಗಿ ಮಾರ್ಪಡಿಸಿ ಸುಣ್ಣ ಬಣ್ಣ ಬಳಿದು, ಕಚೇರಿಯ ಒಳ ಭಾಗದಲ್ಲಿ ಟೈಲ್ಸ್ ಅಳವಡಿಸಿ ಸಿಬ್ಬಂದಿಗಳಿಗೆ ಬಿಡುವಿನ ಸಮಯದಲ್ಲಿ ಆಟವಾಡಲು ಮೈದಾನ ನಿರ್ಮಿಸಿ,ಸುತ್ತಲಿನ ಕಾಡುಗಳನ್ನು ಕಡಿದು ಅಂದಗೊಳಿಸಿದ್ದಾರೆ. ಠಾಣೆಗೆ ಆಗಮಿಸುವ ಸಾರ್ವಜನಿಕರಿಗೆ ಹೊಸ ವಾತಾವರಣ ನಿರ್ಮಾಣವಾಗಿದೆ. ಸಿಬ್ಬಂದಿ ಸುರೇಂದ್ರ ಉತ್ತಮ ಕೆಲಸವನ್ನು ಇಲಾಖೆ ಪ್ರಶಂಸಿಸುತ್ತದೆ ಎಂದು ಡಿವೈಎಸ್ಪಿ ಜಯಕುಮಾರ್ ಪ್ರತಿಕ್ರಿಯಿಸಿದ್ದಾರೆ. -ಹೆಚ್.ಕೆ. ಜಗದೀಶ್.