ಕುಶಾಲನಗರ, ಡಿ. 23: ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕುಶಾಲನಗರ ಘಟಕದ ಚುನಾವಣೆಯಲ್ಲಿ ಕೆ.ಆರ್.ಜಗದೀಶ್, ಗಣೇಶ್ ಆಯ್ಕೆಯಾಗಿದ್ದಾರೆ.
ಶನಿವಾರ ಕುಶಾಲನಗರದಲ್ಲಿ ನಡೆದ ಚುನಾವಣೆಯಲ್ಲಿ 70 ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದು, ಜಗದೀಶ್ 58 ಮತ ಪಡೆದು ವಿಜೇತರಾಗಿದ್ದಾರೆ. ಪ್ರತಿಸ್ಪರ್ಧಿ ಮಂಜುನಾಥ್ 9 ಮತ ಪಡೆದರೆ, ಇನ್ನೋರ್ವ ಅಭ್ಯರ್ಥಿ ಗಣೇಶ್ 53 ಮತಗಳಿಸಿ ಇವರ ಪ್ರತಿಸ್ಪರ್ಧಿ ಕೆ. ಬಿ.ರಾಜು 14 ಮತ ಗಳಿಸಿದ್ದಾರೆ. ಉಳಿದಂತೆ ಸಮಿತಿಗೆ 7 ಮಂದಿ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ರಘು ತಿಳಿಸಿದ್ದಾರೆ.