ಶ್ರೀಮಂಗಲ, ಡಿ. 22: ಯುಕೊ ಆಶ್ರಯದಲ್ಲಿ ಕಾಕೋಟುಪರಂಬುವಿನಲ್ಲಿ ತಾ. 25 ರಂದು ಆಯೋಜಿಸಿರುವ 6ನೇ ವರ್ಷದ ಕೊಡವ ಮಂದ್ ನಮ್ಮೆ 2019ರ ಕಾರ್ಯಕ್ರಮದ ಬಗ್ಗೆ ಬೆಪ್ಪುನಾಡಿನ 9 ಗ್ರಾಮಗಳಲ್ಲಿ ಮನೆ ಮನೆ ಮತ್ತು ಸಂಘ ಸಂಸ್ಥೆಗಳಿಗೆ ತೆರಳಿ ಪ್ರಚಾರ ಕಾರ್ಯವನ್ನು ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ನೇತೃತ್ವದಲ್ಲಿ ನಡೆಸಲಾಯಿತು.

ಬೆಪ್ಪುನಾಡಿನ ಕಾಕೋಟುಪರಂಬು, ಕಡಂಗಮರೂರು, ಬೊಳ್ಳುಮಾಡು, ಕುಂಜಿಲಗೇರಿ, ಕದನೂರ್, ಮೈತಾಡಿ, ಅರಮೇರಿ, ಕೆದಮುಳ್ಳೂರು, ಬೊಳ್ಳರಿಮಾಡ್ ಹಾಗೂ ಸುತ್ತಲಿನ ಗ್ರಾಮಗಳಾದ ಚೆಂಬೆಬೆಳ್ಳೂರು, ದೇವಣಗೇರಿ ಮುಂತಾದ ಕಡೆಗಳಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ಪ್ರಚಾರ ಕಾರ್ಯಕ್ರಮದಲ್ಲಿ ಯುಕೊ ಸಂಘಟನೆಯ ಸದಸ್ಯರುಗಳಾದ ಚೆಪ್ಪುಡಿರ ಸುಜುಕರುಂಬಯ್ಯ, ಕಳ್ಳಿಚಂಡ ರಾಬಿನ್‍ಸುಬ್ಬಯ್ಯ, ಗುಡಿಯಂಗಡ ಲಿಖಿನ್‍ಬೋಪಣ್ಣ, ನೆಲ್ಲಮಕ್ಕಡ ಮಾದಯ್ಯ, ಮಚ್ಚಮಾಡ ರಮೇಶ್, ಪುದಿಯೊಕ್ಕಡ ದಿನೇಶ್ ಪಾಲ್ಗೊಂಡಿದ್ದರು.