ಮಡಿಕೇರಿ, ಡಿ. 22: ವಕೀಲರು ಸಮಾಜದಲ್ಲಿ ಒಳ್ಳೆಯ ಹೆಸರು ಪಡೆಯುವಂತಾಗಲು ಸೇವಾ ಮನೋಭಾವದಿಂದ ಕಾರ್ಯನಿರ್ವ ಹಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ರೋಟರಿ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ಯಾನಲ್ ವಕೀಲರಿಗೆ ನಗರದ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಕೀಲರಲ್ಲಿ ಸೇವಾ ಮನೋ ಭಾವವಿರಬೇಕು. ಜನರಿಗೆ ಕಾನೂನಿನ ಬಗ್ಗೆ ಜ್ಞಾನ ಮತ್ತು ಅರಿವುಗಳನ್ನು ಮೂಡಿಸಬೇಕಿದೆ. ವಕೀಲರು ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಪಡೆದು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಾಗ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾನೂನಿನ ಬಗ್ಗೆ ಪ್ರತಿಯೊಬ್ಬ ರಲ್ಲಿಯೂ ಅರಿವು ಇದ್ದಾಗ ಉತ್ತಮ ಸಮಾಜ ನಿರ್ಮಾಣ ಮಾಡ ಬಹುದು. ಆ ನಿಟ್ಟಿನಲ್ಲಿ ಪ್ಯಾನಲ್ ವಕೀಲರು ಹೆಚ್ಚಿನ ಜ್ಞಾನ ಪಡೆದು ಉತ್ತಮ ಸೇವೆ ಸಲ್ಲಿಸು ವಂತಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಾನೂನಿಗೆ ಸಂಬಂಧಿಸಿ ದಂತೆ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದಕ್ಕೆ ಪ್ಯಾನಲ್ ವಕೀಲರು ಕೈಜೋಡಿಸು ವಂತಾಗಬೇಕು ಎಂದು ಹೇಳಿದರು. ಪ್ರಾಸ್ತ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, 2013 ರಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ಯಾನಲ್ ವಕೀಲರಿಗೆ ಕಾನೂನು ತರಬೇತಿ ನೀಡುವುದರ ಬಗ್ಗೆ ಒಂದು ರೂಪುರೇಷೆಯನ್ನು ಜಾರಿಗೆ ತಂದಿತು. ಅದರ ಪ್ರಕಾರ ಪ್ಯಾನಲ್ ವಕೀಲರಿಗೆ ಕಾನೂನಿನ ವಿವಿಧ ವಿಷಯ ಹಾಗೂ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನು ಗಳಲ್ಲಿನ ಬೇರೆ ಬೇರೆ ವಿಷಯಗಳನ್ನು ಪ್ಯಾನಲ್ ವಕೀಲರು ಮನವರಿಕೆ ಮಾಡಿಕೊಳ್ಳುವುದು ಅಗತ್ಯ ಎಂದರು. ಪ್ಯಾನಲ್ ವಕೀಲರಲ್ಲಿ ಮುಖ್ಯವಾಗಿ ಜ್ಞಾನ, ಕೌಶಲ್ಯ, ಮೌಲ್ಯ ವರ್ತನೆ ಹಾಗೂ ಈ ಮೂರು ಗುಣಗಳನ್ನು ಸಕರಾತ್ಮಕವಾಗಿ ಅಳವಡಿಸಿಕೊಂಡರೆ ವಕೀಲ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಪ್ಯಾನಲ್ ವಕೀಲರಿಗೆ ಎರಡು ದಿನಗಳ ತರಬೇತಿ ಹಾಗೂ ಕಾರ್ಯಗಾರ ಏರ್ಪಡಿಸಿದ್ದು, ವಕೀಲರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ವ್ಯಕ್ತಿತ್ವ ವಿಕಸನ ಕುರಿತು ಪುತ್ತೂರಿನ ನ್ಯಾಯವಾದಿ ಸೂರ್ಯ ನಾರಾಯಣ ಮಾಹಿತಿ ನೀಡಿದರು. ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು. ಪ್ರೀತಂ, ವಕೀಲರಾದ ಸ್ಮೀತ, ರೋಟರಿ ಅಧ್ಯಕ್ಷ ಕೆ.ಎಸ್. ತಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅನುಪಮ ಕಿಶೋರ್ ಪ್ರಾರ್ಥಿಸಿ ದರು. ರೋಟರಿ ಅಧ್ಯಕ್ಷ ಕೆ.ಎಸ್. ತಮ್ಮಯ್ಯ ಸ್ವಾಗತಿಸಿ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿ, ವಂದಿಸಿದರು.