ಮಡಿಕೇರಿ, ಡಿ. 21: ಕೊಡಗು ಜಿಲ್ಲೆಯಲ್ಲಿ ಎಲ್ಲ ರೀತಿಯ ಕೃಷಿ ಚಟುವಟಿಕೆಗಳು; ದೈನಂದಿನ ಕೆಲಸ ಗಳನ್ನು ನಿರ್ವಹಿಸುವದರೊಂದಿಗೆ; ಕಾಫಿ ತೋಟಗಳು, ಗದ್ದೆ ಬಯಲುಗಳನ್ನು ಸಮೃದ್ಧಿಗೊಳಿಸುತ್ತಾ ಬಂದಿರುವ, ಈ ಮಣ್ಣಿನ ಮಕ್ಕಳಾದ ಆದಿವಾಸಿ ಜನಾಂಗದ ಹಾಡಿ ಮಂದಿಯ ಗೋಳನ್ನು ಹೇಳಿ ಕೊಂಡರೂ ಕೇಳುವವರೇ ಇಲ್ಲವಂತೆ! ಹೀಗೆಂದು ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಪೈಸಾರಿ ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ.

ಹೈಸೊಡ್ಲೂರು ಪೈಸಾರಿಯಲ್ಲಿ ನೆಲೆಸಿರುವ 45 ರಿಂದ 60 ರಷ್ಟು ಗಿರಿಜನ ಕುಟುಂಬಗಳಿಗೆ; ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಕರ್ನಾಟಕ ಸರಕಾರ ಘೋಷಿಸಿರುವ ಯಾವದೇ ಸವಲತ್ತು ಈ ತನಕ ಲಭಿಸಿಲ್ಲವೆಂದು ಅಲ್ಲಿನ ನಿವಾಸಿಗಳು ಬಹಿರಂಗಗೊಳಿಸಿದ್ದಾರೆ.

ಈ ಹಾಡಿಯಲ್ಲಿ ವೃದ್ಧರು, ಮಹಿಳೆಯರು, ಕಿಶೋರಿಯರು, ಗರ್ಭಿಣಿ - ಬಾಣಂತಿಯರು ನೆಲೆಸಿದ್ದು; ತಲೆಗೊಂದು ಸೂರು ಕೂಡ ಇಲ್ಲದೆ ಕಡುಬಡತನದ ನಡುವೆ ಕೂಲಿ ಮಾಡಿ ಹೊತ್ತು ಹೊತ್ತಿನ ತುತ್ತಿಗಾಗಿ ಬಳಲುತ್ತಿದ್ದಾರೆ. ಈ ಮಂದಿಯನ್ನು ಹುದಿಕೇರಿ ಗ್ರಾ.ಪಂ. ಕೂಡ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ನೀರಿನ ಬವಣೆ : ಗಿರಿಜನ ಅಭಿವೃದ್ಧಿ ಯೋಜನೆಯಡಿ ಕರ್ನಾಟಕ ಸರಕಾರ ಘೋಷಿಸಿರುವ ಯಾವದೇ ಸವಲತ್ತು ಈ ತನಕ ಲಭಿಸಿಲ್ಲವೆಂದು ಅಲ್ಲಿನ ನಿವಾಸಿಗಳು ಬಹಿರಂಗಗೊಳಿಸಿದ್ದಾರೆ.

ಈ ಹಾಡಿಯಲ್ಲಿ ವೃದ್ಧರು, ಮಹಿಳೆಯರು, ಕಿಶೋರಿಯರು, ಗರ್ಭಿಣಿ - ಬಾಣಂತಿಯರು ನೆಲೆಸಿದ್ದು; ತಲೆಗೊಂದು ಸೂರು ಕೂಡ ಇಲ್ಲದೆ ಕಡುಬಡತನದ ನಡುವೆ ಕೂಲಿ ಮಾಡಿ ಹೊತ್ತು ಹೊತ್ತಿನ ತುತ್ತಿಗಾಗಿ ಬಳಲುತ್ತಿದ್ದಾರೆ. ಈ ಮಂದಿಯನ್ನು ಹುದಿಕೇರಿ ಗ್ರಾ.ಪಂ. ಕೂಡ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ನೀರಿನ ಬವಣೆ : ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸದಿರುವದು ಆದಿವಾಸಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಟೀಕಾ ಪ್ರಹಾರ : ಈ ಹಾಡಿ ಮಂದಿಗೆ ಸರಕಾರ ವರ್ಷದಲ್ಲಿ ಆರು ತಿಂಗಳು ಉಚಿತ ಪೌಷ್ಠಿಕ ಆಹಾರ ಕಲ್ಪಿಸಲು; ಐಟಿಡಿಪಿ ಇಲಾಖೆ ಆಧಿಕಾರಿಗಳಿಗೆ ನಿರ್ದೇಶಿಸಿದ್ದರೂ; ಈ ಮಂದಿ ಇತ್ತ ತಿರುಗಿಯೂ ನೋಡಿಲ್ಲವೆಂದು ಅಲ್ಲಿನ ಹಿರಿಯರಾದ ಲಿಂಗ, ಕರ್ಕು, ಬೋಜ, ಬೊಳ್ಳಿ ಮಣಿ, ಸರಸು ಮೊದಲಾದವರು ಟೀಕಾ ಪ್ರಹಾರ ನಡೆಸಿದರು. ನಮ್ಮ ಮಕ್ಕಳು ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿಲ್ಲದೆ ಸರಕಾರದ ಎಲ್ಲ ಸೌಲಭ್ಯದಿಂದ ವಂಚಿತರಾಗಿದ್ದಾರೆ; ಸರಕಾರ ಘೋಷಿಸಿರುವ ಯಾವದೇ ಸವಲತ್ತು ಲಭಿಸಿಲ್ಲ; ಇದುವರೆಗೆ ಗ್ರಾ.ಪಂ. ಪ್ರತಿನಿಧಿಗಳಿಂದ ಮೊದಲ್ಗೊಂಡು ಯಾವೊಬ್ಬರೂ ಜನಪ್ರತಿನಿಧಿಗಳು; ಅಧಿಕಾರಿಗಳು ಕಷ್ಟ ಕೇಳಲು ಬಂದಿಲ್ಲವೆಂದು ನೋವನ್ನು ತೋಡಿಕೊಂಡರು.

ಆಶ್ರಮ ಆಸರೆ: ಹಾಡಿ ಮಂದಿಯ ಕಷ್ಟ ಆಲಿಸಿರುವ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ತಾತ್ಕಾಲಿಕ ಸಮುದಾಯ ಭವನವನ್ನು ಪ್ಲಾಸ್ಟಿಕ್ ಹಾಗೂ ಬಿದಿರಿನಿಂದ ಕಲ್ಪಿಸಿ; ಸೌರದೀಪ ಒದಗಿಸಲಾಗಿದೆ. ಆಗಿಂದಾಗ್ಗೆ ಅಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿ ಔಷಧಿ, ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ ಎಂದು ಕರ್ಕು ಹಾಗೂ ಸರಸು ತಿಳಿಸಿದ್ದಾರೆ.

ಶೌಚಾಲಯ : ಅಂತೆಯೇ ಪುರುಷರು ಹಾಗೂ ಮಹಿಳೆಯರಿಗಾಗಿ ಆಶ್ರಮದಿಂದ ಒಂದೊಂದು ಶೌಚಾಲಯ ಕಲ್ಪಿಸಿಕೊಡಲಾಗಿದೆ. ಮೂಲಭೂತ ಸೌಲಭ್ಯಕ್ಕಾಗಿ ಈಚೆಗೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ಹುದಿಕೇರಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ; ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ನಿವಾಸಿಗಳು ಆರೋಪಿ ಸಿದ್ದಾರೆ. ಜಿಲ್ಲೆಯಲ್ಲಿ ಹೈಸೊಡ್ಲೂರು ಪೈಸಾರಿ ನಿವಾಸಿಗಳಂತೆ ಅದೆಷ್ಟೋ ಕಡೆಗಳಲ್ಲಿ ಗಿರಿಜನ ಕುಟುಂಬಗಳು ಸರಕಾರಿ ಸೌಲಭ್ಯವಂಚಿತರಾಗಿದ್ದು; ಈ ದಿಸೆಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಣ್ತೆರೆಯಬೇಕಿದೆ. ‘2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ತಲೆಗೊಂದು ಸೂರಿನೊಂದಿಗೆ; ಪೌಷ್ಠಿಕ ಆಹಾರದ ಕೊರತೆಯಿಂದ ಬಳಲದಂತೆ ಕಾಳಜಿ ವಹಿಸಲಾಗುವದು’ ಎಂಬ ಪ್ರಧಾನಿ ಮೋದಿ ಆಶಯವನ್ನು ಸಾಕಾರಗೊಳಿಸುವತ್ತ; ಕನಿಷ್ಟ ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಅದು ಸಂಬಂಧಪಟ್ಟವರ ಹೊಣೆಗಾರಿಕೆಯೂ ಹೌದು.

-ಶ್ರೀಸುತ