ಶನಿವಾರಸಂತೆ, ಡಿ. 21: ಶನಿವಾರಸಂತೆ ಸಮೀಪದ ಬೆಟ್ಟದಳ್ಳಿ ಗ್ರಾಮದ ಕೂಲಿಕಾರ್ಮಿಕ ಡಿ.ಎಸ್. ದಿನೇಶ ಎಂಬವರನ್ನು ದಾರಿ ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದಿನೇಶ್ ತಮ್ಮ ಗದ್ದೆಯಲ್ಲಿ ಕುಯ್ಲು ಕೆಲಸ ಮಾಡಿದ್ದು, ತಮ್ಮ ಸಂಬಂಧಿಕರ ಟ್ರ್ಯಾಕ್ಟರ್ನಲ್ಲಿ ತುಂಬಿಸಿಕೊಂಡು ಬರುತ್ತಿರುವಾಗ ಹಿತ್ತಲಕೇರಿ ತಿರುವು ಬಳಿ ಪರಿಚಿತ ಒಡೆಯನಪುರದ ಎ.ಎನ್. ಲೋಕೇಶ್ ತಮ್ಮ ಟ್ರ್ಯಾಕ್ಟರ್ನಲ್ಲಿ ಬರುತ್ತಿದ್ದಾಗ ರಸ್ತೆ ಬದಿ ಬಿಡುವ ವಿಚಾರದಲ್ಲಿ ಹಲ್ಲೆ ನಡೆಸಿರುವುದಾಗಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಬೋಪಣ್ಣ ಅವರು ವಿಧಿ 341, 323, 504 ಐಪಿಸಿ ಪ್ರಕರಣ ದಾಖಲಿಸಿದ್ದಾರೆ.