ಸೋಮವಾರಪೇಟೆ, ಡಿ. 21: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಗೌಡಳ್ಳಿ ನವದುರ್ಗಾಪರಮೇಶ್ವರಿ ದೇವಾಲಯ ಸಮಿತಿಯ ಆಶ್ರಯದಲ್ಲಿ ತಾ. 23ರಂದು (ನಾಳೆ) ಸಮೀಪದ ಗೌಡಳ್ಳಿ ನವದುರ್ಗಾಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಸೋಮವಾರಪೇಟೆ ವಲಯ ಒಕ್ಕೂಟಗಳ ಪದಗ್ರಹಣ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದೆ.
ತಾ. 23ರಂದು ಪೂರ್ವಾಹ್ನ 7.30ಕ್ಕೆ ಅರ್ಚಕ ವಿಶ್ವರೂಪ ಆಚಾರ್ ಅವರ ಪೌರೋಹಿತ್ವದಲ್ಲಿ ಪೂಜಾ ಕಾರ್ಯಗಳು ಪ್ರಾರಂಭಗೊಳ್ಳಲಿದ್ದು, 11 ಗಂಟೆಗೆ ಮಹಾಮಂಗಳಾರತಿ, 11.15ಕ್ಕೆ ಒಕ್ಕೂಟಗಳ ಪದಗ್ರಹಣ-ಧಾರ್ಮಿಕ ಸಮಾರಂಭ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಪ್ಪಚ್ಚುರಂಜನ್ ನೆರವೇರಿಸಲಿದ್ದು, ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.