ಗೋಣಿಕೊಪ್ಪ ವರದಿ, ಡಿ. 21: ಬಿರುನಾಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಿಸಲಾಯಿತು.

ಒಟ್ಟು 80 ವಿದ್ಯಾರ್ಥಿಗಳು ಸವಲತ್ತು ಸ್ವೀಕರಿಸಿದರು. ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಪಿಡಿಒ ಎಸ್. ಎಂ. ರವಿ, ಕಾರ್ಯದರ್ಶಿ ಮೋಹನ್ , ಮುಖ್ಯ ಶಿಕ್ಷಕಿ ಸಿ. ಎಸ್. ಗಂಗಮ್ಮ, ಸಹ ಶಿಕ್ಷಕ ರವೀಶ್, ಎಸ್. ಡಿ. ಎಂ. ಸಿ. ಅಧ್ಯಕ್ಷೆ ಎಚ್. ಆರ್. ತುಳಸಿ ವಿತರಣೆ ಮಾಡಿದರು.