ಮಡಿಕೇರಿ, ಡಿ. 21: ಸುಳ್ಯದ ಕೆ.ವಿ.ಜಿ. ಆಸ್ಪತ್ರೆ, ಕೊಡಗು ಸತ್ಯಾಸೇವಾ ಸಮಿತಿ, ಎನ್‍ಐಎಂಎ ಹಾಗೂ ಎಎಫ್‍ಐ ಜಿಲ್ಲಾ ಘಟಕದ ಆಶ್ರಯದಲ್ಲಿ ತಾ. 30 ರಂದು ಮೇಕೇರಿಯ ಸತ್ಯಸಾಯಿ ಮಂದಿರದಲ್ಲಿ ಉಚಿತ ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯಲಿರುವ ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಸಾರ್ವಜನಿಕರಲ್ಲಿ ಸಂಘಟಕರು ಕೋರಿದ್ದಾರೆ.