ಗೋಣಿಕೊಪ್ಪಲು, ಡಿ. 21: ಗೋಣಿಕೊಪ್ಪಲು ಪ್ರಾಥಮಿಕ ಮತ್ತು ಅನುದಾನಿತ ಪ್ರೌಢಶಾಲೆಗಳ ಜಂಟಿ ಆಶ್ರಯದ ವಾರ್ಷಿಕ ಕ್ರೀಡೋತ್ಸವ ‘2019’ ನಡೆಯಿತು. ಪೂರ್ವಾಹ್ನ ಕ್ರೀಡೋತ್ಸವದ ಉದ್ಘಾಟನೆಯನ್ನು ಸ್ಥಳೀಯ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಎನ್.ಎನ್. ರಾಮರೆಡ್ಡಿ ನೆರವೇರಿಸಿ ವಿದ್ಯಾರ್ಥಿಗಳಿಗೆ ಶಿಸ್ತು ಕರ್ತವ್ಯ ಪ್ರಜ್ನೆಯನ್ನು ತಿಳಿಸಿದರು.
ಅಪರಾಹ್ನದ ಸಮಾರೋಪ ಸಮಾರಂಭÀÀ ಮುಖ್ಯ ಅತಿಥಿಗಳಾದ ಶಾಲೆಯ ಹಳೆಯ ವಿದ್ಯಾರ್ಥಿ ಹಾಕಿ ಒಲಿಂಪಿಯನ್ ಬಾಳೆಯಡ ಕೆ. ಸುಬ್ರಮಣಿ ತಾವು ಪ್ರೌಢಶಾಲೆಯಲ್ಲಿದ್ದ ದಿನಗಳಲ್ಲ್ಲಿ ಇದೇ ಕ್ರೀಡಾಂಗಣದಲ್ಲಿ ಆಡಿದ ಅನುಭವಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಸ್ತು ಸಮಯದ ಸದುಪಯೋಗದೊಂದಿಗೆ ಶೈಕ್ಷಣಿಕ ಪ್ರಗತಿಯೊಂದಿಗೆ ರಾಷ್ಟ್ರದ ಸತ್ಪ್ರಜೆಯಾಗಲು ಕರೆಯಿತ್ತರು.
ಈ ಸಂದರ್ಭ ಶಾಲಾಡಳಿತ ಮಂಡಳಿಯಲ್ಲಿ ಸುದೀರ್ಘ ಅವಧಿಗೆ ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ ದಿ. ಜಮ್ಮಡ ಕರುಂಬಯ್ಯ ಅವರ ಅಮೂಲ್ಯ ಸೇವೆಯನ್ನು ಸ್ಮರಿಸಿಕೊಂಡು ದಿವಂಗತರ ಪರವಾಗಿ ಅವರ ಪತ್ನಿ ನಿಮ್ಮಿ ಕರುಂಬಯ್ಯ ಅವರಿಗೆ ಕಾರ್ಯಕ್ರಮದಲ್ಲಿ ಗೌರವ ಸನ್ಮಾನವನ್ನು ನೀಡಲಾಯಿತು. ಹಲವು ದತ್ತಿನಿಧಿ ವಿದ್ಯಾರ್ಥಿ ವೇತನಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ಹಂಚಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಪಟ್ರಪಂಡ ಚಿಣ್ಣಪ್ಪ, ಉಪಾಧ್ಯಕ್ಷ ನಾಮೆರ ಕೆ. ದೇವಯ್ಯ, ಕಾರ್ಯದರ್ಶಿ ಕುಪ್ಪಂಡ ಎಂ. ತಿಮ್ಮಯ್ಯ ಮತ್ತು ಶಾಲಾ ಆಡಳಿತ ಮಂಡಳಿಯ ಖಾಯಂ ಆಹ್ವಾನಿತ ಚೆಕ್ಕೆರ ಪಿ. ಸೋಮಯ್ಯ, ನಿರ್ದೇಶಕರುಗಳಾದÀ ಪಿ.ಎ. ಅಕ್ಕಮ್ಮ, ಎಂ.ಬಿ ಮಾಚಯ್ಯ, ಸಿ.ಎಸ್. ಮನು ಕಾವೇರಪ್ಪ, ಕೆ.ಎಂ. ಕುಶಾಲಪ್ಪ, ಕೆ.ಎಂ. ಸುಬ್ಬಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಪಥಸಂಚಲನ, ಆಕರ್ಷಕ ದೈಹಿಕ ಅಂಗಸಾಧನೆ, ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಮುಖ್ಯ ಅತಿಥಿಗಳಿಗೆ ಗೌರವ ರಕ್ಷೆ ಮುಂತಾದವುಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.