ಮಡಿಕೇರಿ, ಡಿ. 21: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಕೊಡಗಿನ ಅತೀ ಎತ್ತರದ ಬೆಟ್ಟ ಹಾಗೂ ಕರ್ನಾಟಕ ಮೂರನೆ ಅತೀ ಎತ್ತರವಾದ ಬೆಟ್ಟಕ್ಕೆ ಚಾರಣ ಹೋಗಲಾಗಿತ್ತು. ಕಕ್ಕಬ್ಬೆಯ ಸಮೀಪವಿರುವ ತಡಿಯಂಡಮೋಳ್ ಬೆಟ್ಟ ಚಾರಣವನ್ನು ಬಲು ಯೋಗ್ಯವಾಗಿದೆ.ಅತ್ಯಂತ ಹೆಚ್ಚು ಜನ ಚಾರಣ ಮಾಡುವ ಸಾಹಸ ಬೆಟ್ಟ ಇದಾಗಿದೆ.ಇದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್¸ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ರೋರ್ವರ್ ನಾಯಕ ವನಿತ್ ಕುಮಾರ್ ನೇತೃತ್ವದಲ್ಲಿ ಸುಮಾರು 14 ರೋವರ್ಸ್ ಹಾಗೂ 38 ರೇಂಜರ್ಸ್‍ಗಳು ಭಾಗವಹಿಸಿದ್ದರು.