ಮಡಿಕೇರಿ ಡಿ.21 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕೊಡವ ಮಕ್ಕಡ ಕೂಟದ ಸಂಯುಕ್ತ ಆಶ್ರಯದಲ್ಲಿ 5ನೇ ವರ್ಷದ ಜಿಲ್ಲಾಮಟ್ಟದ ‘ಮಕ್ಕಡ ಕೊಡವ ಜನಪದ ಸಾಂಸ್ಕøತಿಕ ನಮ್ಮೆ’ ಜ.6 ರಂದು ಟಿ.ಶೆಟ್ಟಿಗೇರಿಯಲ್ಲಿ ನÀಡೆಯಲಿದೆಯೆಂದು ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.ಸುದ್ದಿಗೋಷಿಷ್ಠಿಯಲ್ಲಿ ಮಾತ ನಾಡಿದ ಅವರು, ಟಿ.ಶೆಟ್ಟಿಗೇರಿಯ ರೂಟ್ಸ್ ಎಜುಕೇಷನ್ ಟ್ರಸ್ಟ್‍ನಲ್ಲಿ ಮಕ್ಕಡ ಕೊಡವ ಜನಪದ ಸಾಂಸ್ಕøತಿಕ ನಮ್ಮೆ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಆಟ್ ಪಾಟ್ ಪೈಪೋಟಿ, ಕವಿಗೋಷ್ಠಿ, ವಿಚಾರ ಗೋಷ್ಠಿ, ಅಕಾಡೆಮಿಯಿಂದ ಪ್ರಕಟಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದರು.ಕೊಡವ ಬಾಷೆ ಆಚಾರ -ವಿಚಾರ ಸಂಸ್ಕøತಿಯ ಬಗ್ಗೆ ಈಗಿನಿಂದಲೇ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ 1 ನೇ ತರಗತಿಯಿಂದ 7 ನೇ ತರಗತಿಯವರೆಗಿನ ಮಕ್ಕಳ ಒಂದನೇ ವಿಭಾಗ ಮತ್ತು 8 ರಿಂದ 10ನೇ ತರಗತಿವರೆಗಿನ 2ನೇ ವಿಭಾಗದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆÉ. ಪ್ರಮುಖವಾಗಿ ಬೊಳಕಾಟ್, ಕೋಲಾಟ್, ಉಮ್ಮತಾಟ್, ಉರ್‍ಟಿಕೊಟ್ಟ್ ಆಟ್, ಸಮ್ಮಂಧ ಅಡ್‍ಕುವೊ, ಬಾಳೋಪಾಟ್, ಕೊಡವ ಪಾಟ್, ವಾಲಗತ್ತಾಟ್, ಪರೆಯಕಳಿ, ಕೊಡವ ನಾಟಕ, ಕೊಡವ ಕವಿಗೋಷ್ಠಿ, ಕೊಡವ ವಿಚಾರಗೋಷ್ಠಿ ಪೈಪೋಟಿಗÀಳನ್ನು ಏರ್ಪಡಿಸಲಾಗಿದೆಯೆಂದು ತಿಳಿಸಿದರು.

ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಆಕರ್ಷಕ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಎರಡು ವಿಭಾಗಗಳಲ್ಲಿ ಹೆಚ್ಚಿನ ಅಂಕ ಪಡೆದ ಶಾಲೆಗಳಿಗೆ ಚಾಂಪಿಯನ್ ಶಿಪ್ ಮತ್ತು ನಗದು ಬಹುಮಾನವಿರುತ್ತದೆ. ಈ ಎಲ್ಲಾ ಪೈಪೋಟಿಯಲ್ಲಿ ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶವಿರುವುದಾಗಿ ತಿಳಿಸಿದರು.

ಉದ್ಘಾಟನೆ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ. ಗಿರೀಶ್ ಕಾರ್ಯಕ್ರಮದ ವಿವರಗಳನ್ನು ನೀಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕೆÀ್ಷ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಬೆಳಗ್ಗೆ 9 ಗಂಟೆಗೆ ರೂಟ್ಸ್ ಎಜುಕೇಷನ್ ಟ್ರಸ್ಟ್‍ನ ನಿರ್ದೇಶಕ ಮಲ್ಲಂಗಡ ಕೆ. ನಿರನ್ ಉತ್ತಪ್ಪ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.(ಮೊದಲ ಪುಟದಿಂದ) ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ ಅಪ್ಪಣ್ಣ, ವೀರಾಜಪೇಟೆಯ ಶಿಕ್ಷಣ ಸಂಯೋಜಕ ಪೋಯಂಗಡ ಆರ್.ಅಯ್ಯಪ್ಪ, ಕೊಡವ ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್, ಕೊಡಗು ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ ಭಾಗವಹಿಸಲಿದ್ದಾರೆಂದರು.

ಅಂದು ಸಂಜೆ 4ಗಂಟೆಗೆ ನಡೆಯಲಿರುವ ಸಮಾರೋಪ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ರೂಟ್ಸ್ ಎಜುಕೇಷನ್ ಟ್ರಸ್ಟ್‍ನ ನಿರ್ದೇಶಕÀ ಮಲ್ಲಂಗಡ ಕೆ. ನಿರನ್ ಉತ್ತಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಟಿ.ಶೆಟ್ಟಿಗೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗುಂಬೀರ ಪದ್ಮಾವತಿ ತಿಮ್ಮಯ್ಯ, ರೂಟ್ಸ್ ಎಜುಕೇಷನ್ ಟ್ರಸ್ಟ್‍ನ ಮುಖ್ಯೋಪಾಧ್ಯಾಯಿನಿ ಕೇಚೆಟ್ಟಿರ ಮಮತ ಅರುಣ, ಮುಖ್ಯೋಪಾಧ್ಯಾಯ ತಿರ್‍ಕಚೇರಿರ ಎಸ್. ಗಣಪತಿ ಭಾಗವಹಿಸಲಿದ್ದಾರೆಂದರು.

ವಿದ್ಯಾರ್ಥಿಗಳು ಕೊಡವ ಭಾಷೆಯ ಕಥೆ, ಕವನ, ಚುಟುಕ, ಕಾದಂಬರಿ, ವೈಚಾರಿಕ ಬರಹವನ್ನು ಅಕಾಡೆಮಿಯ ಕಚೇರಿಗೆ ತಾ.30ರ ಒಳಗೆ ತಲುಪಿಸಿದಲ್ಲಿ ಅಂತಹವರಿಗೂ ಬಹುಮಾನವಿದೆಯೆಂದು ಇದೇ ಸಂದರ್ಭ ಮಾಹಿತಿ ನೀಡಿದರು.

ಅಕಾಡೆಮಿ ಸದಸೆÀ್ಯ ಬಬ್ಬೀರ ಸರಸ್ವತಿ ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಭಾಷಾ ಸಂಸ್ಕøತಿಯ ಉಳಿವಿಗಾಗಿ ನಿರಂತರವಾಗಿ ಹತ್ತು ಹಲ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸರ್ವರು ಸಹಕರಿಸುವಂತೆ ಮನವಿ ಮಾಡಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಸಾಂಸ್ಕøತಿಕ ನಮ್ಮೆಯಲ್ಲಿ ಏಕ ಕಾಲಕ್ಕೆ ವಿವಿಧ ವೇದಿಕೆಗಳಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ಕೊಡವ ವಿಚಾರಗೋಷ್ಠಿಯಲ್ಲಿ ಕೊಡವ ಹಬ್ಬಗಳು, ಕೊಡವ ಪದ್ಧತಿ, ಕೊಡವ ಉಡುಪು, ಆಹಾರ ಪದ್ಧತಿಗಳ ಬಗ್ಗೆ ಮಕ್ಕಳಿಗೆ ವಿಷಯ ಮಂಡಿಸಲು ಅವಕಾಶವಿದೆ. ಈ ಸ್ಪರ್ಧೆಯ ಅತ್ಯುತ್ತಮ ವಿಚಾರ ಮಂಡನೆಯ ವಿಷಯವನ್ನು ಪುಸ್ತಕವನ್ನಾಗಿ ಹೊರ ತರುವ ಚಿಂತನೆ ಇರುವುದಾಗಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಹಾಗೂ ತಂಡಗಳ ನೋಂದಾವಣೆಗಾಗಿ ಕಾರ್ಯಕ್ರಮ ಸಂಚಾಲಕರಾದ ಪಡಿಞರಂಡ ಎ. ಪ್ರಭುಕುಮಾರ್ : 9449763809, ಮುಲ್ಲೇಂಗಡ ರೇವತಿ ಪೂವಯ್ಯ : 9480905756, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ : 9880778047. ಸಂಪರ್ಕಿಸಬಹುದಾಗಿದೆ.