ಮಡಿಕೇರಿ, ಡಿ. 21: ಯುವ ಪತ್ರಕರ್ತ ಹಾಗೂ ಪ್ರತಿಭಾವಂತ ಛಾಯಾಗ್ರಾಹಕನಾಗಿದ್ದ ಜೀವನ್ ಪಾಲೆಕ್ಕಾಡ್ (27) ತಾ. 21 ರಂದು ನಿಧನರಾಗಿದ್ದಾರೆ. ಮಡಿಕೇರಿಯ ಸುಬ್ರಹ್ಮಣ್ಯನಗರದ ಚಂದ್ರ ಮತ್ತು ಮಾಂಗಲ್ಯ ದಂಪತಿ ಪುತ್ರ ಜೀವನ್, ಚಿತ್ತಾರ ವಾಹಿನಿ, ಪ್ರಜಾ ಟಿವಿಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು, ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‍ಕ್ಲಬ್, ಜೀವನ್ ಅವರ ನಿಧನಕ್ಕೆ ಕಂಬನಿ ಮಿಡಿದಿವೆ. ಪತ್ರಿಕಾಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಜೀವನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಪ್ರೆಸ್‍ಕ್ಲಬ್ ಮತ್ತು ಸಂಘದಿಂದ ಅಂತ್ಯಕ್ರಿಯೆಗೆ ಆರ್ಥಿಕ ನೆರವು ನೀಡಲಾಯಿತು.

ಸಂತಾಪ: ಪತ್ರಕರ್ತ ಜೀವನ್ ಪಾಲಕ್ಕಾಡ್ ನಿಧನಕ್ಕೆ ಗೋಣಿಕೊಪ್ಪ ಪ್ರೆಸ್‍ಕ್ಲಬ್ ವತಿಯಿಂದ ಸಂತಾಪ ಸೂಚಿಸಲಾಯಿತು.

ಸಭಾಂಗಣದಲ್ಲಿ ಪಾಲಕ್ಕಾಡ್ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಲಾಯಿತು. ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯದರ್ಶಿ ಎಚ್.ಕೆ. ಜಗದೀಶ್, ಪ್ರಮುಖರಾದ ಕುಪ್ಪಂಡ ದತ್ತಾತ್ರಿ, ಡಿ. ನಾಗೇಶ್, ಮಂಡೇಡ ಅಶೋಕ್, ದರ್ಶನ್ ದೇವಯ್ಯ, ವಿ.ವಿ. ಅರುಣ್ ಕುಮಾರ್ ಪಾಲ್ಗೊಂಡು ಮೃತ ಜೀವನ್ ಆತ್ಮಕ್ಕೆ ಶಾಂತಿ ಕೋರಿದರು.