ಮಡಿಕೇರಿ, ಡಿ. 20: ಕೊಡಗಿನ ಕಕ್ಕಬ್ಬೆ ಮೂಲದ ಐಕೋಳಂಡ ಪ್ರಶಾಂತ್ ಭೀಮಯ್ಯ ಅವರು ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪ್ರಶಾಂತ್ ಭೀಮಯ್ಯ, ಕಾಲೇಜು ದಿನಗಳಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಸಕ್ರಿಯ ಕಾರ್ಯಕರ್ತ. ಎಬಿವಿಪಿ ಮತ್ತು ಅದರ ವಿವಿಧ ಆಯಾಮಗಳಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದು, ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿದ ನಂತರ ಅವರು ಉದ್ಯಮಿಯಾದರು. ಈ ಮೊದಲು ಅವರನ್ನು ಮೈಸೂರಿನ ಡಾ. ಗಂಗೂ ಭಾಯ್ ಹಾನಗಲ್ ಮ್ಯೂಸಿಕ್ ಅಂಡ್ ಪರ್ಫಾರ್ಮಿಂಗ್ ಆರ್ಟ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮಕರಣ ಮಾಡಲಾಗಿತ್ತು. ಪ್ರಸ್ತುತ ಅವರನ್ನು ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದೆ. ಇವರು ಕಕ್ಕಬ್ಬೆಯ ದಿ. ಭೀಮಯ್ಯ ಹಾಗೂ ದಮಯಂತಿ ದಂಪತಿಯ ಪುತ್ರ.