ಸುಂಟಿಕೊಪ್ಪ, ಡಿ. 20: ಜಿಲ್ಲಾ ಮರಕೆಲಸ ಮತ್ತು ತಲೆಹೊರೆ ಕಾರ್ಮಿಕರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಕಚೇರಿಯಲ್ಲಿ ಗೌರವ ಅಧ್ಯಕ್ಷ ಹೆಚ್.ಎಸ್. ಬೆಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಮುತ್ತಯ್ಯ (ಮುತ್ತುರಾಜ್) ಉಪಾಧÀ್ಯಕ್ಷರಾಗಿ ಕೆ.ವಿ. ಜಾಯಿದ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಡಿ. ಕುಟ್ಟಪ್ಪನ್, ಖಜಾಂಚಿಯಾಗಿ ರಶೀಕ್ ನೇಮಕಗೊಂಡರು.
ಜನವರಿ 8ರಂದು ನಡೆಯಲಿರುವ ಅಖಿಲ ಭಾರತ ಮುಷÀ್ಕರದಲ್ಲಿ ಸಂಘವು ಸಂಪೂರ್ಣ ಬೆಂಬಲ ನೀಡಲಿದ್ದು ಈ ಸಂದರ್ಭ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಮತ್ತು ನಿವೇಶನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.