*ಗೋಣಿಕೊಪ್ಪಲು, ಡಿ. 20 : ಶ್ರೀ.ರಾಮ ಸೇನೆ ಯುವಕ ಸಂಘ ಗೋಣಿಕೊಪ್ಪಲು ಇವರ ವತಿಯಿಂದ ಮೊದಲ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

ಪಂದ್ಯಾಟದ ಆಟಗಾರರನ್ನು ಹಾರಾಜಿನ ಮೂಲಕ ಆಯ್ಕೆ ಮಾಡಲಾಗಿದ್ದು, ತಾ. 21 (ಇಂದು) ಮತ್ತು 22ರಂದು ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳು ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಪಂದ್ಯಾಟಕ್ಕೆ ಶ್ರೀ. ರಾಮ ಸೇನೆ ಯುವಕ ಸಂಘದ 10 ಸದಸ್ಯರ ತಂಡ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಪಂದ್ಯಾಟದಲ್ಲಿ ಭಗತ್ ಸಿಂಗ್ ಯುವಕ ಸಂಘ, ಆಲ್ ಸ್ಟಾರ್ ಕ್ರಿಕೆಟರ್ಸ್, ವಿರಾಟ್ ಕ್ರಿಕೆಟರ್ಸ್, ಶ್ರೀ. ರಾಮಸೇನೆ ಯುವಕ ಸಂಘ, ಫುಡ್ ಬ್ಯಾಂಕ್, ಮೈಟಿ ಕ್ರಿಕೆಟರ್ಸ್, ಕೆ.ಎಸ್. ಕ್ರಿಕೆಟರ್ಸ್, ಎ1 ಕ್ರಿಕೆಟರ್ಸ್, ಕ್ಯಾಮೆರಾ ಕ್ರೀವ್ ಸೇರಿದಂತೆ ಸುಮಾರು 9 ತಂಡಗಳು ಭಾಗವಹಿಸಲಿದೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ, ಟ್ರೋಫಿ ನೀಡಲಾಗುತ್ತದೆ.

ಯುವಕರಲ್ಲಿ ಕ್ರೀಡಾ ಉತ್ಸಾಹದ ಔತಣ ನೀಡುವ ಉದ್ದೇಶದಿಂದ ಶ್ರೀ. ರಾಮಸೇನೆ ಯುವಕ ಸಂಘ ಈ ಕ್ರೀಡೆಯನ್ನು ಆಯೋಜಿಸಿದೆ. ಸಂಘದ 10 ಸದಸ್ಯರ ತಂಡ ಈ ಕ್ರೀಡಾ ಉತ್ಸವ ನಡೆಸಲು ಮುಂದಾಗಿದೆ. ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಉತ್ತಮ ಕ್ರಿಕೆಟ್ ಪಂದ್ಯಾಟವನ್ನು ನಡೆಸಲು ಶ್ರಮಪಡುತ್ತಿದೆ ಎಂದು ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಪಂದ್ಯಾಟವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಪಾಲಿಬೆಟ್ಟ ರಸ್ತೆ ತಿರುವಿನಿಂದ ಮುಖ್ಯರಸ್ತೆಯ ಮೂಲಕ ಮೈದಾನದವರೆಗೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡದ ಆಟಗಾರರ ಮೆರವಣಿಗೆ ನಡೆಯಲಿದೆ. ಇಂದು ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟ