ಮಡಿಕೇರಿ, ಡಿ. 20: 13ನೇಯ ಆವೃತ್ತಿಯ ಐಪಿಎಲ್ ಕ್ರಿಕೆಟ್‍ನ ಹಲವು ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು; ಕೊಡಗಿನ ಆಟಗಾರ ರಾಬಿನ್ ಉತ್ತಪ್ಪ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಹಿಂದೆ ಕೋಲ್ಕತ್ತಾ ನೈಟ್‍ರೈಡರ್ಸ್ ತಂಡದ ಪರ ಆಡುತ್ತಿದ್ದ ರಾಬಿನ್ ಉತ್ತಪ್ಪ ರಾಜಸ್ಥಾನ ರಾಯಲ್ಸ್‍ನಿಂದ ಈ ಬಾರಿ ರೂ. 3 ಕೋಟಿ ಗಳಿಸಿದರು. ರೂ. 1.50 ಕೋಟಿ ಮೂಲ ಬೆಲೆ ಹೊಂದಿದ್ದ ರಾಬಿನ್ ಅವರನ್ನು ಆರ್‍ಆರ್ ರೂ. 3 ಕೋಟಿಗೆ ಖರೀದಿಸಿದೆ.