ಬೆಂಗಳೂರು, ಡಿ.20: ಕರ್ನಾಟಕದಲ್ಲಿ ಹುಲಿ ಸಂರಕ್ಷಣೆ ಗಾಗಿ ಮಾಡಿ ರುವ ಕೆಲಸಕ್ಕೆ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಎ ಟಿ ಪೂವಯ್ಯ ಅವರಿಗೆ ರಾಷ್ಟ್ರಮಟ್ಟದ ಡಬ್ಲ್ಯುಡಬ್ಲ್ಯು ಎಫ್ ಪಾಟಾ ಬಾಗ್ ಮಿತ್ರಾ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಇಂದು ನೀಡಿ ಗೌರವಿಸಲಾಗಿದೆ.ಮೂಲತ: ಕೊಡಗಿನ ಚಿಕ್ಕಮಂಡೂರುವಿನವರಾದ ಅಜ್ಜಿಕುಟ್ಟಿರ ಪೂವಯ್ಯ ಅವರು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಕೆಲಸ ಮಾಡಿ 32 ವರ್ಷಗಳ ಅನುಭವ ಹೊಂದಿದ್ದಾರೆ. ಈ ಹಿಂದೆ ನಾಗರ ಹೊಳೆಯಲ್ಲಿ ವಲಯಾರಣ್ಯಾಧಿಕಾರಿ ಯಾಗಿದ್ದರು, ಬಂಡೀಪುರ, ಪುಷ್ಪಗಿರಿ ಅರಣ್ಯಗಳಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಈಗ ಮತ್ತೆ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮರದ ಮಾಫಿಯಾಗಳು, ಅತಿಕ್ರಮಣಕಾರರು ಮತ್ತು ಭೂಗಳ್ಳರಿಂದ ವನ್ಯಜೀವಿಗಳನ್ನು ರಕ್ಷಿಸುವ ಅವರ ಕಾರ್ಯವನ್ನು ನೋಡಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಇವರಿಗೆ 2008ರಲ್ಲಿ ರಾಷ್ಟ್ರೀಯ ಮಟ್ಟದ ಏಷ್ಯಾ ವನ್ಯಜೀವಿ ಸೇವಾ ಅಭಯಾರಣ್ಯ ಪ್ರಶಸ್ತಿ ಬಂದಿತ್ತು. ಕಳೆದ ಅಕ್ಟೋಬರ್ 9ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರು 65ನೇ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿಯೂ ಗೌರವಿಸಿದ್ದರು.