ಮಡಿಕೇರಿ, ಡಿ. 20 : ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2019-20 ನೇ ಶೈಕ್ಷಣಿಕ ಸಾಲಿನ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರವು ತಾ. 21 ರಿಂದ (ಇಂದಿನಿಂದ) ತಾ. 27 ರವರೆಗೆ ಹೆಗ್ಗಳ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ನಡೆಯಲಿದೆ. ಸುಮಾರು 80 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ವಿವಿಧ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳು, ಶ್ರಮದಾನ, ಚಾರಣವನ್ನು ಏರ್ಪಡಿಸಲಾಗಿದೆ. ತಾ. 25 ರಂದು ವಿಶೇಷವಾಗಿ ಗ್ರಾಮೀಣ ಕ್ರೀಡಾಕೂಟ ಹಾಗೂ ಸ್ಥಳೀಯ ಮಹಿಳಾ ಸಂಘ ಸಂಸ್ಥೆಗಳ ಮಹಿಳೆಯರೇ ತಯಾರಿಸಿದ ಉತ್ಪನಗಳ ಪ್ರದರ್ಶನ ಮಾರಾಟದ ಮಹಿಳಾ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.