ಮಡಿಕೇರಿ, ಡಿ. 20: ಇಲ್ಲಿನ ಜಿಲ್ಲಾ ಪೊಲೀಸ್ ಮೈದಾನದಲ್ಲಿ ತಾ. 18 ರಿಂದ ಆರಂಭಗೊಂಡಿರುವ ಮೂರು ದಿನಗಳ ಕೊಡಗು ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭವು; ಈ ಸಂಜೆಗತ್ತಲೆ ನಡುವೆ ಮುಕ್ತಾಯಗೊಂಡಿತು. ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಹಾಗೂ ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರುಗಳು ಪಾಲ್ಗೊಂಡು; ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ; ಆಶಯ ನುಡಿಯಾಡಿದರು.

ದೇಶ ಹಾಗೂ ರಾಜ್ಯದಲ್ಲಿ ಪೌರತ್ವ ಕಾಯ್ದೆ ಸಂಬಂಧ ಎದುರಾಗಿರುವ ಪರಿಸ್ಥಿತಿ ಹಿನ್ನೆಲೆ; ಪೊಲೀಸ್ ಕ್ರೀಡಾಕೂಡ ಸರಳ ರೀತಿಯಲ್ಲಿ ನಡೆಯಿತು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬ ವರ್ಗದ ಮಹಿಳೆಯರು, ಮಕ್ಕಳು, ನಿವೃತ್ತ ಪೊಲೀಸ್ ಬಂಧುವರ್ಗದವರು ಭಾಗವಹಿಸಿದ್ದರು.

ಕ್ರೀಡಾ ಕೂಟದ ಸಮಾರೋಪ ವೇಳೆಯಲ್ಲಿ ಜರುಗಿದ ಹಗ್ಗಜಗ್ಗಾಟ ಸ್ಪರ್ಧೆ ಸಂದರ್ಭ; ಜಿಲ್ಲಾ ಪೊಲೀಸ್ ಶಸಸ್ತ್ರದಳ ಪ್ರಥಮ ಹಾಗೂ ವೀರಾಜಪೇಟೆ ಪೊಲೀಸ್ ಉಪ ವಿಭಾಗ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿಷ್ಠೆಯೊಂದಿಗೆ ಉತ್ತಮ ಸೇವೆ ಸಲ್ಲಿಸಿ; ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದವರನ್ನು ಗುರುತಿಸಿ; ಇಲಾಖೆಯಿಂದ ಗೌರವಿಸಲಾಯಿತು. ವಿವಿಧ ಪೈಪೋಟಿಗಳಲ್ಲಿ ಸ್ವತಃ ಪೊಲೀಸ್ ವರಿಷ್ಠಾಧಿಕಾರಿ, ಉಪ ಅಧೀಕ್ಷಕರು, ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳ ಸಹಿತ ಪುರುಷ ಹಾಗೂ ಮಹಿಳಾ ಸಿಬ್ಬಂದಿ ಸಾಧನೆ ಯೊಂದಿಗೆ ಬಹುಮಾನಗಿಟ್ಟಿಸಿ ಕೊಂಡು ಚಪ್ಪಾಳೆಗೆ ಭಾಜನರಾದರು. ಓಟದ ಸ್ಪರ್ಧೆ, ರಿಲೇ, ಉದ್ದ ಜಿಗಿತ, ಬ್ಯಾಡ್ಮಿಂಟನ್, ಥ್ರೋಬಾಲ್, ಬರ್ಜಿ ಎಸೆತ, ಭಾರದ ಗುಂಡು ಎಸೆತ ಮುಂತಾದ ಪೈಪೋಟಿ ಏರ್ಪಡಿಸ ಲಾಗಿತ್ತು. ದೈನಂದಿನ ಒತ್ತಡದೊಂದಿಗೆ ಕೆಲಸ ಕಾರ್ಯಗಳ ನಡುವೆ ಪೊಲೀಸರು ಕ್ರೀಡಾಕೂಟದಲ್ಲಿ ಶಾರೀರಿಕ ಮತ್ತು ಬುದ್ಧಿ ಮತ್ತೆ ಪ್ರದರ್ಶಿಸಿ ಗೆಲುವಿನ ನಗು ಬೀರಿದಲ್ಲದೆ; ಈ ರಾತ್ರಿಯ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಮೆರೆದರು.