ಮಡಿಕೇರಿ, ಡಿ. 20: ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಬೆಳಗಾವಿ ತರಬೇತಿ ಸಂಸ್ಥೆಯಲ್ಲಿ 2019-20ನೇ ಸಾಲಿನ ರಾಜ್ಯ ಮಟ್ಟದ “ಅಂತರ ಕೆ.ಐ.ಸಿ.ಎಂ ತರಬೇತಿ ಸಂಸ್ಥೆಗಳ ಚರ್ಚಾ ಸ್ಪರ್ಧೆ”ಯಲ್ಲಿ ಮಡಿಕೇರಿ ಕೆ.ಐ.ಸಿ.ಎಂ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಾದ ಚರಿತ ಕೆ.ಜಿ. ಮತ್ತು ಕೃತಿ ಹೆಚ್.ವಿ. ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.