ವೀರಾಜಪೇಟೆ, ಡಿ. 20: ದ್ವೇಷ, ಅಸೂಯೆಗಳಿಂದ ಪ್ರಗತಿ ಸಾಧ್ಯವಿಲ್ಲ, ಅದಕ್ಕೆ ಬದಲಾಗಿ ಪ್ರೀತಿ, ಸ್ನೇಹ, ವಿಶ್ವಾಸ, ಕರುಣೆ ಪ್ರತಿಯೊಬ್ಬರಲ್ಲಿ ಇರಬೇಕು ಮತ್ತು ಪ್ರತಿಯೊಬ್ಬರೂ ವಿಶ್ವ ಮಾನವನಾಗಬೇಕು ಎಂದು ಪೆÇನ್ನಂಪೇಟೆ ಶ್ರೀ ಶಾರದಾಶ್ರಮದ ಶ್ರೀ ಸ್ವಾಮಿ ಬೋದಸ್ವರೂಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಅಮ್ಮತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂತ ಅನ್ನಮ್ಮ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ನಡೆದ ವಿಶೇಷ ಶಿಬಿರದಲ್ಲಿ ಶಿಬಿರ ಜ್ಯೋತಿ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಅವರು ಮಾತನಾಡಿ, ಜ್ಯೋತಿಯು ಅಂಧಕಾರವನ್ನು ಕಳೆಯುತ್ತದೆ. ಮಾನವನು ಇದರಿಂದ ಹೊಸ ಜೀವನ ಆರಂಭಿಸುತ್ತಾನೆ. ಜ್ಯೋತಿಯ ಬೆಳಕಿನಂತೆ ಮಾನವನ ಜೀವನ ಉಜ್ವಲಿಸಬೇಕು. ಮಾನವ ತನ್ನಲ್ಲಿರುವ ದುರ್ಗುಣಗಳಿಂದ ಮುಕ್ತಿ ಹೊಂದಬೇಕು. ಶಿಕ್ಷಣದ ಮುಖ್ಯ ಉದ್ದೇಶವೇ ಬದಲಾವಣೆ ಆಗಿದೆ ಎಂದರು
ಶಿಬಿರ ಜ್ಯೋತಿ ಕಾರ್ಯಕ್ರಮವನ್ನು ಅಮ್ಮತಿಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ಸೋಮಯ್ಯ ಉದ್ಘಾಟಿಸಿದರು. ಈ ಸಂದರ್ಭ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಅರ್ಜುನ್, ಉಪನ್ಯಾಸಕರು, ಶಿಬಿರಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.