ಮಡಿಕೇರಿ, ಡಿ. 20: ಕೇಂದ್ರ ಪುರಸ್ಕøತ ಯೋಜನೆಯಡಿ ಕೃಷಿ ಯಾಂತ್ರೀಕರಣದ ಕುರಿತು ಕರ್ನಾಟಕ ರಾಜ್ಯ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ 2019-20ನೇ ಸಾಲಿನ ರೈತರು ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗಿಸುವ ವಿವಿಧ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯಡಿ ತೋಟಗಾರಿಕೆ ರೈತ ಫಲಾನುಭವಿಗಳಿಗೆ ಸಾಮಾನ್ಯ ವರ್ಗದ ಪುರುಷರಿಗೆ ಶೇ. 40, ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇ. 50 ಸಹಾಯಧನ ಹಾಗೂ ಪ.ಜಾತಿ/ಪ.ಪಂಗಡ ಪುರುಷರಿಗೆ ಹಾಗೂ ಮಹಿಳೆಯರಿಗೆ ಶೇ. 50 ಸಹಾಯಧನ ನೀಡುವ ಅವಕಾಶವಿದೆ.

ತೋಟಗಾರಿಕೆ ಬೆಳೆಗಳಲ್ಲಿ ಬಳಸುವಂತಹ ಯಂತ್ರೋಪಕರಣಗಳಲ್ಲಿ ವಿವಿಧ ರೀತಿಯ ಮಾದರಿಗಳು ಲಭ್ಯವಿದ್ದು ರೈತರು ತೋಟಗಾರಿಕೆ ನಿರ್ದೇಶನಾಲಯದಿಂದ ಅನುಮೋದಿಸಲ್ಪಟ್ಟ ಸಂಸ್ಥೆಗಳಿಂದ ಯಂತ್ರೋಪಕರಣಗಳನ್ನು ಖರೀದಿಸಬೇಕಾಗಿದೆ. ಹೆಚ್ಚಿನ ಮಾಹಿತಿಯನ್ನು ಜಿಲ್ಲೆಯ ಆಯಾಯ ತಾಲೂಕಿನ ತೋಟಗಾರಿಕೆ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಮಡಿಕೇರಿ ತಾಲೂಕಿಗೆ ರೂ. 10 ಲಕ್ಷ, ಸೊಮವಾರಪೇಟೆ ತಾಲೂಕಿಗೆ ರೂ.10 ಲಕ್ಷ ಹಾಗೂ ಪೊನ್ನಂಪೇಟೆ ತಾಲೂಕಿಗೆ ರೂ.10 ಲಕ್ಷ ಅನುದಾನ ಲಭ್ಯವಿದೆ. ಈ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ತೋಟಗಾರಿಕೆ ರೈತ ಫಲಾನುಭವಿಗಳು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಮಡಿಕೇರಿ ದೂ. 08272-220555. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ಜಿಪಂ) ಸೋಮವಾರಪೇಟೆ ದೂ. 08276-281364, ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು (ಜಿಪಂ) ಪೊನ್ನಂಪೇಟೆ ದೂ.08272-249637 ಇವರನ್ನು ಸಂಪರ್ಕಿಸುವಂತೆ (ಜಿಪಂ) ತೋಟಗಾರಿಕೆ ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.