ಶನಿವಾರಸಂತೆ, ಡಿ. 19: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಪೂರ್ವಭಾವಿ ಸಭೆ ಲಯನ್ಸ್ ಕಚೇರಿಯಲ್ಲಿ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ತಾ. 24 ರಂದು ಶನಿವಾರಸಂತೆ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಲಯನ್ಸ್ ಕ್ಲಬ್ ಹಾಗೂ ಕೃಷಿ ಇಲಾಖೆಯ ಸಹಯೋಗದಿಂದ ನಡೆಸಲಿರುವ ಕೃಷಿ ಮೇಳಕ್ಕೆ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆಗಳ ಬಗ್ಗೆ ವಿಜ್ಞಾನಿಗಳು ಹಾಗೂ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಲಿದ್ದು, ಸಭೆಗೆ ಹೆಚ್ಚಿನ ಬೆಳೆಗಾರರನ್ನು ಹಾಜರಾಗಲು ಕೋರುವಂತೆ ಸದಸ್ಯರಿಗೆ ಮನವಿ ಮಾಡಿದರು.

ಲಯನ್ಸ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಮಾತನಾಡಿ, ವಿಜ್ಞಾನಿಗಳೊಂದಿಗೆ ಕಾಫಿ ಬೋರ್ ಬಗ್ಗೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಅವಕಾಶವಿದೆ. ಲಯನ್ಸ್ ಸದಸ್ಯ ಕಾರ್ಯಪ್ಪ ಅವರ ಕೋರಿಕೆಯಂತೆ ಸಾವಯವ ಕೃಷಿಯ ಬಗ್ಗೆ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳೊಂದಿಗೆ ಮಾಹಿತಿ ಕೊಡಿಸಲಾಗುವುದು ಎಂದರು.

ಕ್ಲಬ್ ಉಪಾಧ್ಯಕ್ಷರುಗಳಾದ ಜಿ. ನಾರಾಯಣ ಸ್ವಾಮಿ, ಬಿ.ಸಿ. ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ಸದಸ್ಯರುಗಳಾದ ಪುಟ್ಟಪ್ಪ, ಚಂದ್ರಶೇಖರ್, ಸಿ.ಪಿ. ಹರೀಶ್, ನರೇಶ್‍ಚಂದ್ರ, ಕಾರ್ಯಪ್ಪ, ಕೇಶವಮೂರ್ತಿ, ಕುಶಾಲಪ್ಪ, ಪುಟ್ಟರಾಜ್, ಯೋಗೀಶ್, ಕಿರಣ್, ವಿಜಯಕುಮಾರ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.