*ಗೋಣಿಕೊಪ್ಪಲು, ಡಿ. 19: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದ ಕುಂಬಳತ್ತಮನಿ ಕಾಲೋನಿಗೆ ಹಾದುಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ರೂ. 20 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಪ್ರಮುಖ ವಾಗಿ ರಸ್ತೆಗಳ ನಿರ್ಮಾಣವಾಗಬೇಕು. ಹೀಗಾದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ನಗರಗಳಂತೆ ಗ್ರಾಮೀಣ ಭಾಗದ ಜನತೆಯೂ ಸುಗಮವಾಗಿ ಸಂಚರಿಸಲು ಮತ್ತು ತಮ್ಮ ನಿತ್ಯದ ವ್ಯಾಪಾರ ವಹಿವಾಟುಗಳಿಗೆ ಹಾದಿ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ನೀಡುತ್ತಿದೆ. ಅನುದಾನಗಳನ್ನು ಸದುಪಯೋಗ ಪಡಿಸಿಕೊಂಡು ಗ್ರಾಮೀಣ ಭಾಗಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ, ಆರ್.ಎಂ.ಸಿ. ಅಧ್ಯಕ್ಷ ಮಾಚಂಗಡ ಸುಜಾ ಬೋಪಯ್ಯ, ಗ್ರಾ.ಪಂ. ಸದಸ್ಯೆ ಶಿಲ್ಪ, ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕಾನೂರು ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಭರತ್ ಮಾಚು, ಕೋತೂರು ಬೂತ್ ಅಧ್ಯಕ್ಷ ಅಣ್ಣಾಳಮಾಡ ನವೀನ್, ಮಲ್ಲಮಾಡ ಈಶ್ವರ, ಕಾನೂರು ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಉಪಾಧ್ಯಕ್ಷ ದೀಪಕ್, ಬೆಕ್ಕೆಸೊಡ್ಲೂರು ಕ್ಲಬ್ ಕಾರ್ಯದರ್ಶಿ ಮಚ್ಚಿಮಾಡ ಡಾಲಿ, ಪೆÇನ್ನಂಪೇಟೆ ವಿ.ಎಸ್.ಎಸ್.ಎನ್. ಉಪಾಧ್ಯಕ್ಷ ನಿರನ್ ಮೊಣ್ಣಪ್ಪ, ಪ್ರಮುಖರಾದ ತೀತಮಾಡ ಜಯ ಹಾಜರಿದ್ದರು.