ಶನಿವಾರಸಂತೆ, ಡಿ. 19: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‍ನಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಯಿತು. ಶನಿವಾರಸಂತೆ ಪೊಲೀಸ್ ಠಾಣಾಧಿ ಕಾರಿ ಕೃಷ್ಣನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅಪರಾಧ ತಡೆಯ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿ ಗಳು ಕನಸು ಕಾಣುವುದು ಮಾತ್ರವಲ್ಲದೆ ನನಸು ಮಾಡಲು ಪರಿಶ್ರಮದಿಂದ ಓದಬೇಕು ಎಂದರು. ಆಟೋ ಚಾಲಕರು, ವಾಹನ ಚಾಲನೆ ಮಾಡುವವರು ದಾಖಲಾತಿಗಳನ್ನು ಹೊಂದಿರಬೇಕು. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳಾದ ಜಿ. ಪರಮೇಶ್, ಶಣ್ಮುಖನಾಯಕ್, ವಿವೇಕ್, ಬೋಪಣ್ಣ, ಶಫೀಕ್ ಇತರರು ಉಪಸ್ಥಿತರಿದ್ದರು.